Breaking
10 May 2026, Sun

ನರೇಗಾ ಯೋಜನೆ ಹೆಸರು ಬದಲಾವಣೆ: ರದ್ದತಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಬಂಟ್ವಾಳ: ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಬಡವರಿಗಾಗಿ 100 ದಿನದ ಕೂಲಿ ಮಾಡಲು ರೂಪಿಸಿದ ನರೇಗಾ ಯೋಜನೆಯನ್ನು ಈಗಿನ ಮೋದಿ ಸರಕಾರ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ (ನರೇಗಾ)ಹೆಸರು ಬದಲಾವಣೆ ಹಾಗೂ ಯೋಜನೆ ರದ್ದತಿ ವಿರುದ್ಧ ಸಂಗಬೆಟ್ಟು ಹಾಗೂ ಕರ್ಪೆ ವಲಯ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಯಿತು.

ಸಿದ್ಧಕಟ್ಟೆ ಚರ್ಚ್ ಬಳಿಯಿಂದ ಸಂಗಬೆಟ್ಟು ಪಂಚಾಯತ್ ವರೆಗೆ ಕಾಲ್ನಡಿಗೆಯಲ್ಲಿ ಪಾದಯಾತ್ರೆ ಮಾಡಿ ಸಂಗಬೆಟ್ಟು ಗ್ರಾಮ ಪಂಚಾಯತ್ ಕಾರ್ಯದರ್ಶಿಯವರಲ್ಲಿ ಮನವಿ ನೀಡಲಾಯಿತು.

ಈ ಸಂದರ್ಭದಲ್ಲಿ ಸಂಗಬೆಟ್ಟು ಹಾಗೂ ಕರ್ಪೆ ವಲಯ ಕಾಂಗ್ರೆಸ್ ಅಧ್ಯಕ್ಷರುಗಳಾದ ಜಯಕರ ಶೆಟ್ಟಿ, ಗಣೇಶ ಮಾಸ್ಟರ್ ಹಾಗೂ ಹಾಲಿ ಪಂಚಾಯತ್ ಸದಸ್ಯರುಗಳು, ಮಾಜಿ ಅಧ್ಯಕ್ಷರು, ಮಾಜಿ ಉಪಾಧ್ಯಕ್ಷರು, ಕಾಂಗ್ರೆಸ್ ನಾ ಪ್ರಮುಖರು ಕಾರ್ಯಕರ್ತರು, ಕಾಂಗ್ರೆಸ್ ಅಭಿಮಾನಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *