Breaking
10 May 2026, Sun

ಕುಂಬಳೆ ಆರಿಕ್ಕಾಡಿ ಟೋಲ್‌ಗೇಟ್ ವಿರೋಧಿ ಪ್ರತಿಭಟನೆ ತೀವ್ರ; ಆಕ್ರೋಶದ ನಡುವೆ ಆಸ್ತಿಗೆ ಹಾನಿ

ಮಂಗಳೂರು: ಮಂಗಳೂರು–ಕಾಸರಗೋಡು ಗಡಿ ಭಾಗದಲ್ಲಿರುವ ಕುಂಬಳೆಯ ಆರಿಕ್ಕಾಡಿಯಲ್ಲಿ ಟೋಲ್‌ಗೇಟ್ ನಿರ್ಮಿಸಲು ಮುಂದಾಗಿರುವ ಸರ್ಕಾರದ ಕ್ರಮವನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ತೀವ್ರಗೊಂಡ ಘಟನೆ ಜ.14 ರಂದು ನಡೆದಿದೆ.

ಜ.14 ರ ರಾತ್ರಿ ಪ್ರತಿಭಟನಾಕಾರರು ಆರಿಕ್ಕಾಡಿಯಲ್ಲಿ ಜಮಾಯಿಸಿ ಟೋಲ್‌ಗೇಟ್‌ನ ಗ್ಲಾಸ್ ಹಾಗೂ ಸಿಸಿ ಟಿವಿ ಕ್ಯಾಮೆರಾ, ವಾಹನಗಳನ್ನು ತಡೆಯುವ ಟೋಲ್ ಬೂತ್ ನ ಹ್ಯಾಂಡಲ್ ಗಳನ್ನು ಪ್ರತಿಭಟನಾಕಾರರು ಕಿತ್ತೆಸೆದಿದ್ದಾರೆ. ಸ್ಕ್ಯಾನರ್ ಗಳಿಗೆ ಕಪ್ಪು ಸ್ಟಿಕ್ಕರ್ ಲಗತ್ತಿಸಿ ಹಾನಿ ಉಂಟುಮಾಡಿದ್ದಾರೆ ಎನ್ನಲಾಗಿದೆ.

ಈಗಾಗಲೇ ತಲಪಾಡಿಯಲ್ಲಿ ಟೋಲ್‌ಗೇಟ್ ಕಾರ್ಯನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ, ಕೇವಲ 20 ಕಿಲೋಮೀಟರ್ ಅಂತರದಲ್ಲಿ ಮತ್ತೊಂದು ಟೋಲ್‌ಗೇಟ್ ಸ್ಥಾಪಿಸುವುದು ಜನಸಾಮಾನ್ಯರಿಗೆ ಹೆಚ್ಚುವರಿ ಆರ್ಥಿಕ ಹೊರೆ ಆಗಲಿದೆ ಎಂದು ಪ್ರತಿಭಟನಾಕಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *