Breaking
9 May 2026, Sat

ಕೊರಳಿನಲ್ಲಿದ್ದ ಶಾಲು ಗ್ರೈಂಡರ್‌ಗೆ ಸಿಲುಕಿ ಗೃಹಿಣಿ ಸಾವು

ಮಂಜೇಶ್ವರ : ಕೊರಳಿನಲ್ಲಿದ್ದ ಶಾಲು ಗ್ರೈಂಡರ್‌ಗೆ ಸಿಲುಕಿ ಗೃಹಿಣಿ ಮೃತಪಟ್ಟ ಘಟನೆ ವರ್ಕಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ.

ಕಲ್ಮಿಂಜ ಗ್ರಾಮದ ಅಬ್ದುಲ್ಲ ಖಾದರ್ ಅವರ ಪತ್ನಿ ಮೈಮೂನ ( 40) ಮೃತಪಟ್ಟ ಮಹಿಳೆ.

ಗ್ರೈಂಡರ್ ನಲ್ಲಿ ಮೆಣಸು ಕಡೆಯುವ ವೇಳೆ ಈ ಅನಾಹುತ ಸಂಭವಿಸಿದ್ದು, ತಕ್ಷಣವೇ ಅವರನ್ನು ಕೋಣಾಜೆ ಬಳಿಯ ಕಣಚೂರು ಆಸ್ಪತ್ರೆಗೆ ಕರೆತಂದರು ಆದಾಗಲೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಮಂಜೇಶ್ವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *