Breaking
26 Sep 2026, Sat

ಮಣಿನಾಲ್ಕೂರು ಶ್ರೀ ಮಹಾವಿಷ್ಣು ದೇವಸ್ಥಾನ ಇಳಿಯೂರು 10‌ನೇ ವರ್ಷದ ನಗರ ಭಜನೆಯ ಮಂಗಳೋತ್ಸವ

ಬಂಟ್ವಾಳ: ಮಣಿನಾಲ್ಕೂರು ಶ್ರೀ ಮಹಾವಿಷ್ಣು ದೇವಸ್ಥಾನ ಇಳಿಯೂರು ಹಾಗೂ ಶ್ರೀ ಮಹಾವಿಷ್ಣು ಭಜನಾ ಮಂಡಳಿ ಇಳಿಯೂರು ಸಹಭಾಗಿತ್ವದಲ್ಲಿ ನಡೆಯುವ 10ನೇ ವರ್ಷದ ನಗರ ಭಜನೆಯ ಮಂಗಳೋತ್ಸವ ಹಾಗೂ ರಂಗಪೂಜೆಯು ಜ. 16 ರಂದು ಶ್ರೀ ಕ್ಷೇತ್ರದಲ್ಲಿ ನಡೆಯಲಿದೆ.

ಕ್ಷೇತ್ರದ ಪ್ರಧಾನ ಅರ್ಚಕರಾದ ಶ್ರೀ ಸುಧೀರ್ ಭಟ್ ಇವರ ನೇತೃತ್ವದಲ್ಲಿ ಸಂಜೆ 5:30ಕ್ಕೆ ಭಜನಾ ಸಂಕೀರ್ತಣೆ ಪ್ರಾರಂಭಗೊಂಡು 7: 30 ಗಂಟೆಗೆ ಶ್ರೀ ‌ಮಹಾವಿಷ್ಣು ದೇವರಿಗೆ ಮಹಾಪೂಜೆ ನಡೆಯಲಿದೆ. 8 ಗಂಟೆಗೆ ರಂಗಪೂಜೆ ಜರಗಿ 10ನೇ ವರ್ಷದ ನಗರ ಭಜನೆಯ ಮಂಗಳೊತ್ಸವ ನಡೆಯಲಿದೆ. ಬಳಿಕ ಪ್ರಸಾದ ವಿತರಣೆ ನಡೆದು ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಸ್ಥಾನದ‌ ಆಡಳಿತ ಸಮಿತಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *