Breaking
4 Feb 2026, Wed

ಶಾಲೆಗೆ ತಪ್ಪದೇ ಹೋಗಲು ಹೇಳಿದ್ದಕ್ಕೆ ಬಾಲಕ ಬಾವಿಗೆ ಹಾರಿ ಆತ್ಮಹತ್ಯೆ

ತುಮಕೂರು: ಶಾಲೆಗೆ ತಪ್ಪದೇ ಹೋಗು ಎಂದಿದ್ದಕ್ಕೆ ಬಾಲಕನೊಬ್ಬ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತುಮಕೂರಿನ ಚಿಕ್ಕನಾಯಕನಹಳ್ಳಿ ತಾಲೂಕು ಚೆನ್ನಕಾಟಯ್ಯನ ಗುಡ್ಲು ಗ್ರಾಮದಲ್ಲಿ ನಡೆದಿದೆ.

ಗುಡ್ಲು ಗ್ರಾಮದ ಜಗದೀಶ್ (14) ಎಂಬ ಬಾಲಕ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾನೆ.

ಜಗದೀಶ್ ಕೆಂಕೆರೆ ಸರ್ಕಾರಿ ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದ. ಬಾಲಕನ ತಾಯಿಯ ಕುಟುಂಬ ಅಯ್ಯಪ್ಪ ಮಾಲೆ ಹಾಕಿದ್ದರು. ಈ ಸಂಬಂಧ ಅಲ್ಲಿಗೆ ಹೋಗಿ ಜಗದೀಶ್ ವಾಪಾಸ್ ಬಂದಿದ್ದ. ನಂತರ ಶಾಲೆಗೆ ಹೋಗಲು ನಿರಾಕರಿಸಿದ. ಇದರಿಂದ ತಂದೆ ಬುದ್ದಿವಾದ ಹೇಳಿದ್ದಕ್ಕೆ ಶಾಲೆಗೆ ತೆರಳಿದ್ದ ಬಾಲಕ ಗೆಳೆಯನ ಜೊತೆಗೆ ಮನೆಗೆ ವಾಪಾಸ್ ಬರುವಾಗ ಗೆಳೆಯನನ್ನು ಕಳಿಸಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Leave a Reply

Your email address will not be published. Required fields are marked *