Breaking
25 Sep 2026, Fri

ಪಟಾಕಿ ತಯಾರಿಸುವ ಘಟಕದಲ್ಲಿ ಪಟಾಕಿ ಸ್ಫೋಟ: ಇಬ್ಬರಿಗೆ ಗಾಯ

ಕಾಸರಗೋಡು: ಪಟಾಕಿ ತಯಾರಿಸುವ ಘಟಕದಲ್ಲಿ ಪಟಾಕಿ ಸ್ಫೋಟಗೊಂಡು ಇಬ್ಬರು ಗಾಯಗೊಂಡ ಘಟನೆ ಕುಂಬಳೆ ಅನಂತಪುರ ಕೈಗಾರಿಕಾ ಎಸ್ಟೇಟ್‌ನಲ್ಲಿ ನಡೆದಿದೆ.

ಗಾಯಗೊಂಡವರನ್ನು ತಮಿಳುನಾಡು ಶಿವಕಾಶಿಯ ಶಂಕರ ಮತ್ತು ಕರುಪ್ಪ ಸ್ವಾಮಿ ಎಂದು ಗುರುತಿಸಲಾಗಿದೆ.

ಘಟನೆಯಿಂದ ಪಟಾಕಿ ತಯಾರಿಕ ಘಟಕದ ಮಿಕ್ಸಿಂಗ್ ಶೆಡ್ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ. ಸ್ಪೋಟದ ವೇಳೆ ಕಾರ್ಮಿಕರು ಹೊರಗೆ ಹೋಗಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬಂದಿಗಳು ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ.

Leave a Reply

Your email address will not be published. Required fields are marked *