ವಿಟ್ಲ: ಪುಣಚ ಪರಿಯಾಲ್ತಡ್ಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ಭಾನುವಾರ ನಡೆಯಿತು.
ಸಮಾರಂಭ ಉದ್ಘಾಟಿಸಿ ಮಾತನಾಡಿದ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ನಿರ್ದೇಶಕ ಟಿ ಜಿ. ರಾಜಾರಾಮ ಭಟ್ ಬದಲಾವಣೆಯ ಪರ್ವಕಾಲದಲ್ಲಿ ಸಹಕಾರಿ ಸಂಘಗಳು ಪೂರಕವಾಗಿ ಕಾರ್ಯ ನಿರ್ವಹಿಸಬೇಕಿದೆ. ಕೇಂದ್ರ ಸರಕಾರದ ನೂತನ ಸಹಕಾರಿ ನೀತಿಯಂತೆ ಸಹಕಾರಿ ಸಂಘಗಳು ಉತ್ಪಾದನಾ ಉದ್ಯಮ ಘಟಕಗಳಾಗಿ ಪರಿವರ್ತನೆಯಾಗ ಬೇಕಾಗಿದೆ ಎಂದರು.
ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಲಿ) ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ ರಾಷ್ಟ್ರೀಕೃತ ಬ್ಯಾಂಕುಗಳು ಕೃಷಿಕರಿಗೆ ಸಾಲ ನೀಡಲು ಹಿಂದೇಟು ಹಾಕಿದ ಸಂದರ್ಭದಲ್ಲಿ ಕೃಷಿ ಪತ್ತಿನ ಸಹಕಾರಿ ಸಂಘಗಳು ರೈತರನ್ನು ಕೈಹಿಡಿದು ಮುನ್ನಡೆಸಿವೆ ಎಂದು ತಿಳಿಸಿದರು.
ಸಹಕಾರ ಸಪ್ತಾಹದ ಮೆರವಣಿಗೆಯನ್ನು ಪದ್ಮಶ್ರೀ ಮಹಾಲಿಂಗ ನಾಯ್ಕ್ ಮತ್ತು ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟ ಅಧ್ಯಕ್ಷ ಸುಚರಿತ ಶೆಟ್ಟಿ ಉದ್ಘಾಟಿಸಿದರು.ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ ಕೌಶಲ ಶೆಟ್ಟಿ ಧ್ವಜಾರೋಹಣ ನೆರವೇರಿಸಿದರು.’
ಸಹಕಾರಿ ಉದ್ಯಮಗಳಲ್ಲಿ ಪರಿವರ್ತನೆ’ ಕುರಿತು ಸಹಕಾರಿ ಭಾರತಿ ಮಧ್ಯ ಕ್ಷೇತ್ರೀಯ ಸಂಪರ್ಕ ಪ್ರಮುಖ್ ಎಸ್. ಆರ್. ಸತೀಶ್ಚಂದ್ರ ಉಪನ್ಯಾಸ ನೀಡಿದರು.ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಸಹಕಾರಿ ಯೂನಿಯನ್ ನ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಎಸ್ ವಿ. ಹಿರೇಮಠ, ಯೂನಿಯನ್ ನಿರ್ದೇಶಕ ಪದ್ಮಶೇಖರ ಜೈನ್, ಪುಣಚ ಗ್ರಾಮ ಪಂಚಾಯತ್ ಅಧ್ಯಕ್ಷೆ ಬೇಬಿ ಪಟಿಕಲ್ಲು, ಕೇಪು ಗ್ರಾಮ ಪಂಚಾಯತಿ ಅಧ್ಯಕ್ಷ ರಾಘವ ಮಣಿಯಾಣಿ,ಪುಣಚ ವ್ಯವಸಾಯ ಸೇವಾ ಸಹಕಾರಿ ಸಂಘದಉಪಾಧ್ಯಕ್ಷ ಪ್ರೀತಂ ಪೂಂಜ ಅಗ್ರಾಳ, ನಿರ್ದೇಶಕರಾದ ಬಾಲಚಂದ್ರ ಕಟ್ಟೆ, ತಾರಾನಾಥ ಆಳ್ವ, ವಿಘ್ನೇಶ್ವರ ನೀರ್ಕಜೆ, ಜಯರಾಮ ನಾಯ್ಕ, ಪ್ರವೀಣ ಪ್ರಭು,ಚಂದಪ್ಪ ನಾಯ್ಕ, ರಾಧಾಕೃಷ್ಣ, ಕಿಶೋರ್ ಕುಮಾರ್ ಎಸ್., ದಯಾನಂದ ಬಿ.,ಶ್ರೀಲತಾ, ಹರಿಣಾಕ್ಷಿ, ವಿಟ್ಲ ವಲಯ ಸಹಕಾರಿ ಸಂಘಗಳ ಮೇಲ್ವಿಚಾರಕ ಎಚ್. ಯೋಗೀಶ್ ಬಂಟ್ವಾಳ ವಲಯ ಮೇಲ್ವಿಚಾರಕ ಕೀರ್ತಿರಾಜ್ ಮೊದಲಾದವರು ಉಪಸ್ಥಿತರಿದ್ದರು.
ಪುಣಚ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಅಮೈ ಜನಾರ್ದನ ಭಟ್ ಸ್ವಾಗತಿಸಿದರು. ರಂಜಿತಾ ಕಟ್ಟೆ ಪ್ರಾರ್ಥನೆ ಹಾಡಿದರು.ನಿರ್ದೇಶಕ ಬಾಲಚಂದ್ರ ಕಟ್ಟೆ ವಂದಿಸಿದರು. ರಾಮಕೃಷ್ಣ ಮೂಡಂಬೈಲು ಮತ್ತು ಕವಿತಾ ನಾಯ್ಕ್ ಕಾರ್ಯಕ್ರಮ ನಿರ್ವಹಿಸಿದರು.
ಈ ಸಂಧರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಮಣಿಲ ರವಿಶಂಕರ್ ಶಾಸ್ತ್ರೀ, ಲಕ್ಷ್ಮಣ್ ಎಸ್.,ಬಿ. ತಿಮ್ಮಪ್ಪ ನಾಯ್ಕ, ಅಣ್ಣು ಅಜಿಲ,ಉಷಾ, ಶಶಿಕಲಾ ಅವರನ್ನು ಸನ್ಮಾನಿಸಲಾಯಿತು.