Breaking
23 Mar 2026, Mon

ಜ.11. ಪಂಜಿಕಲ್ಲು ನೇತಾಜಿ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ʼಬಾಲಗೋಕುಲ ಜ್ಞಾನ ಮಂದಿರ ಉದ್ಘಾಟನೆ ಮತ್ತು ಶಾಲಾ ವಾರ್ಷಿಕೋತ್ಸವʼ

ಬಂಟ್ವಾಳ: ಬುಡೋಳಿಯ, ಪಂಜಿಕಲ್ಲು ನೇತಾಜಿ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜ.11ರ ಆದಿತ್ಯವಾರದಂದು ಬಾಲಗೋಕುಲ ಜ್ಞಾನ ಮಂದಿರ ಉದ್ಘಾಟನೆ ಮತ್ತು ಶಾಲಾ ವಾರ್ಷಿಕೋತ್ಸವ ನಡೆಯಲಿದೆ.

ಈ ಕುರಿತು ಇಂದು ಪತ್ರಿಕಾಗೋಷ್ಠಿ ನಡೆದಿದ್ದು ಜಾನಕಿ ಚಾರಿಟೇಬಲ್‌ ಟ್ರಸ್ಟ್‌ (ರಿ.) ಕಾಟಿಪಳ್ಳ, ಹಳೇ ವಿದ್ಯಾರ್ಥಿ ಸಂಘ ಹಾಗೂ ಊರ ಪರವೂರ ಸಹಕಾರದೊಂದಿಗೆ ಈ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 9:30ಕ್ಕೆ ಕಟೀಲು ಶ್ರೀ ಕ್ಷೇತ್ರದ ಅನುವಂಶಿಕ ಅರ್ಚಕರಾದ ವೇ.ಮೂ ಅನಂತಪದ್ಮನಾಭ ಅಸ್ರಣ್ಣರು ದೀಪ ಬೆಳಗಿ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ಶಾಲಾ ಸಂಚಾಲಕರಾದ ಧರ್ಮೇಂದ್ರ ಗಣೇಶಪುರ ತಿಳಿಸಿದರು.

ಬಂಟ್ವಾಳ ಶಾಸಕ ರಾಜೇಶ್‌ ನಾಯ್ಕ್‌, ಮಾಜಿ ಸಚಿವ ಬಿ. ರಮಾನಾಥ ರೈ. ರಾಜ್ಯ ಧಾರ್ಮಿಕ ಪರಿಷತ್‌ ಸದಸ್ಯರಾದ ರವಿಶಂಕರ್‌ ಶೆಟ್ಟಿ ಬಡಾಜೆಗುತ್ತು ಗೌರವ ಉಪಸ್ಥಿತಿ ವಹಿಸಲಿದ್ಧಾರೆ.

ಶಾಲಾ ಸಂಚಾಲಕರಾದ ಧರ್ಮೇಂದ್ರ ಗಣೇಶಪುರ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬೂಡ ಅಧ್ಯಕ್ಷರಾದ ಬೇಬಿ ಕುಂದರ್‌, ಪಂಜಿಕಲ್ಲು ಗ್ರಾಮ ಪಂಚಾಯತ್‌ ಅಧ್ಯಕ್ಷ ನಳಿನ್‌ ಪ್ರಸಾದ್‌ ಗಾಣಿಗ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ , ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕರಾದ ದಿನೇಶ್‌ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತಲಿರಲಿದ್ದಾರೆ ಎಂದರು.

ಸನ್ಮಾನ ಕಾರ್ಯಕ್ರಮ

ಡಾ| ಸಚಿನ್ ನಡ್‌ಕಾ, ಪ್ರೆಸಿಡೆಂಟ್ B.N.I. ಇನ್ಸ್ ಫಯರ್‌ ಚಾಪ್ಟರ್‌ ಮಂಗಳೂರು

ಸುನೀಲ್‌ ದತ್ತ ಪೈ. B.N.I. Land BASF Mangaluru

ಲೂವಿಜಾ ಕುಟ್ಟಿಂಞ, ನಿವೃತ್ತ ಮುಖ್ಯೋಪಾಧ್ಯಾಯರು, ಅಮ್ಮುಂಜೆ ಶಾಲೆ

ರಘುನಾಥ್ ರೈ, ನಿವೃತ್ತ ಮುಖ್ಯೋಪಾಧ್ಯಾಯರು, ಅಮ್ಮುಂಜೆ ಶಾಲೆ

ಲೀನಾ ಪಿಂಟೋ, ನಿವೃತ್ತ ಮುಖ್ಯೋಪಾಧ್ಯಾಯರು, ಅಮ್ಮುಂಜೆ ಶಾಲೆ

ಸುಗುಣ ಶೆಟ್ಟಿ, ನಿವೃತ್ತ ಮುಖ್ಯೋಪಾಧ್ಯಾಯರು, ಅಮ್ಮುಂಜೆ ಶಾಲೆ

ಮಹಾಬಲ, ಸಹ ಶಿಕ್ಷಕರು, ಅಮ್ಮುಂಜೆ ಶಾಲೆ

ಬಾಬು ನಾಯ್ಕ, ಸಹ ಶಿಕ್ಷಕರು, ಅಮ್ಮುಂಜೆ ಶಾಲೆ

ರಾಮಚಂದ್ರ ರಾವ್, ನಿವೃತ್ತ ಮುಖ್ಯೋಪಾಧ್ಯಾಯರು, ಗೂಡಿನಬಳಿ ಶಾಲೆ

ಸುಬ್ರಾಯ ಕಾರಂತ್, ನಿವೃತ್ತ ಮುಖ್ಯೋಪಾಧ್ಯಾಯರು, ಪೊಳಲಿ ಶಾಲೆ

19 ವಯೋಮಾನದ 100ಮೀ. ರಾಷ್ಟ್ರಮಟ್ಟದ ಅಥ್ಲೆಟಿಕ್ಸ್‌ಗೆ ಆಯ್ಕೆಯಾದ ಯಶಸ್ ಡಿ. ಗಣೇಶಪುರ ಇವರುಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಮಧ್ಯಾಹ್ನ 1:30ರಿಂದ ಶಾಲಾ ಮಕ್ಕಳಿಂದ ಹಾಗೂ ಹಳೇ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ದೇವಿಕಿರಣ್‌ ಗಣೇಶ್ ಪುರ ಹಾಗೂ ಬಳಗದವರಿಂದ ʼಹಾಸ್ಯ ಲಹರಿʼ ಕಾರ್ಯಕ್ರಮ ಮೂಡಿಬರಲಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *