Breaking
23 Mar 2026, Mon

ಹಾಸಿಗೆಯಲ್ಲಿ ಮೂತ್ರ ಮಾಡಿದ ಮಗು , ಬಿಸಿ ಸ್ಟೀಲ್ ಸೌಟಿನಿಂದ ಸುಟ್ಟು ಗಾಯಗೊಳಿಸಿದ ಮಲತಾಯಿ

ಕೇರಳ: ಹಾಸಿಗೆಯಲ್ಲಿ ಮೂತ್ರ ಮಾಡಿದ ಮಗುವಿನ ಖಾಸಗಿ ಅಂಗವನ್ನೇ ಬಿಸಿ ಸ್ಟೀಲ್ ಸೌಟಿನಿಂದ ಸುಟ್ಟು ಮಲತಾಯಿಯೊಬ್ಬಳು ಗಾಯಗೊಳಿಸಿದ ಘಟನೆ ಕೇರಳದ ಕಾಂಜಿಕೋಡ್ ಬಳಿ ನಡೆದಿದೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾಂಜಿಕೋಡ್ ನ ಅಂಗನವಾಡಿ ಶಿಕ್ಷಕಿ ನೀಡಿದ ದೂರಿನ ಮೇರೆಗೆ ಬಿಹಾರ ಮೂಲದ ಮಲತಾಯಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

ಅಂಗನವಾಡಿಯಲ್ಲಿ ಐದು ವರ್ಷದ ಮಗು ಕುಳಿತುಕೊಳ್ಳಲು ತುಂಬಾ ಕಷ್ಟ ಪಡುತ್ತಿತ್ತು. ಇದನ್ನು ಗಮನಿಸಿದ ಶಿಕ್ಷಕಿ ಮಗುವಿನ ಬಳಿ ಏನಾಗಿದೆ ಎಂದು ಕೇಳಿದ್ದಾರೆ. ಆಗ ಮಗು ಎಲ್ಲ ವಿಷಯವನ್ನು ಹೇಳಿದೆ. ಮಗುವಿಗೆ ಕೂಡಲೇ ಸೂಕ್ತ ಚಿಕಿತ್ಸೆ ನೀಡಲಾಗಿದೆ.

ಈ ಕುರಿತು ಪೊಲೀಸರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು ಮಗುವಿನ ತಂದೆ ನೇಪಾಳದ ಪ್ರಜೆಯಾಗಿದ್ದು, ಹೊಟೇಲ್ ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಯ ಆರೈಕೆಗೆ ಒಪ್ಪಿಸಲಾಗಿದೆ. ಮಹಿಳೆಯ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಮತ್ತು ಬಾಲ ನ್ಯಾಯ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *