Breaking
25 Sep 2026, Fri

ಮನೆಗೆ ಹೋಗುವ ರಸ್ತೆಯ ಬೇಡಿಕೆ ಈಡೇರಿಕೆಗಾಗಿ ಕುಟುಂಬವೊಂದರ ಪ್ರತಿಭಟನೆ, ಹೋರಾಟಕ್ಕೆ ಅಂಬೇಡ್ಕರ್ ತತ್ವ ಹಿತರಕ್ಷಣಾ ವೇದಿಕೆ ಸಾಥ್

ಬಂಟ್ವಾಳ: ಮನೆಗೆ ಹೋಗಲು ರಸ್ತೆ ಮಾಡಿಕೊಡುವಂತೆ ಬೇಡಿಕೆ ಇಟ್ಟು ಬಂಟ್ವಾಳ ತಹಶಿಲ್ದಾರ್ ಕಚೇರಿಯ ಮುಂಭಾಗದಲ್ಲಿ ಧರಣಿ ಕುಳಿತುಕೊಂಡಿದ್ದ ಕುಟುಂಬವೊಂದರ ಹೋರಾಟಕ್ಕೆ ಅಂಬೇಡ್ಕರ್ ತತ್ವ ಹಿತರಕ್ಷಣಾ ವೇದಿಕೆ ಸಾಥ್ ನೀಡಿದೆ.

ತಾಲೂಕಿನ ಪುಣಚ ಗ್ರಾಮದ ಸುಣ್ಣಂಗಳ ರಾಮಣ್ಣ ನಾಯ್ಕ ಹಾಗೂ ಅವರ ಪತ್ನಿ ಸುನಂದಾ ಮತ್ತು ಮಕ್ಕಳು ರಸ್ತೆಗಾಗಿ ತಹಶಿಲ್ದಾರ್ ಕಚೇರಿಯ ಮುಂಭಾಗದ ಮೆಟ್ಟಿಲ ಮೇಲೆ ಧರಣಿ ಕುಳಿತಕೊಂಡಿದ್ದಾರೆ.

ತಮ್ಮ ಹೋರಾಟ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಕುಟುಂಬ ಕಳೆದ 75 ವರ್ಷಗಳಿಂದ ಕಾಲುದಾರಿ ಮಾತ್ರ ಇದ್ದು, ರಸ್ತೆಗಾಗಿ ನಿರಂತರವಾಗಿ ಹೋರಾಟ ಮಾಡುತ್ತಲೇ ಬಂದಿದ್ದೇವೆಯೇ ಹೊರತು ಲಾಭವಾಗಿಲ್ಲ ಎಂದು ಬೇಸರ ತೋಡಿಕೊಂಡಿದ್ದಾರೆ.

ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಗಿರಿಧರ ನಾಯ್ಕ ನೇತೃತ್ವದಲ್ಲಿ ಧರಣಿ ಕುಳಿತ ಕುಟುಂಬಕ್ಕೆ ವೇದಿಕೆ ಸದಸ್ಯರು ಸಾಥ್ ನೀಡಿದರು. ರಾಮಣ್ಣ ಕುಟುಂಬಕ್ಕೆ ರಸ್ತೆ ನಿರ್ಮಾಣದ ಬಗ್ಗೆ ಕಂದಾಯ ಇಲಾಖೆಗೆ ಲಿಖಿತವಾದ ಅರ್ಜಿಗಳಿವೆ. ಹಾಗಾಗಿ ತಹಶಿಲ್ದಾರ್ ಅವರ ನೇತ್ರತ್ವದಲ್ಲಿ ಜಾಗದ ಸರ್ವೇ ಕಾರ್ಯ ಮಾಡಲಾಗಿದೆ.

ಸ್ವಂತ ಖಾಸಗಿ ಜಾಗದಲ್ಲಿ ರಸ್ತೆಯ ಸಮಸ್ಯೆಗಳಿದ್ದು, ಸರಕಾರಿ ಜಾಗದಲ್ಲಿ ರಸ್ತೆ ನಿರ್ಮಿಸಿಕೊಡುವ ಬಗ್ಗೆ ಕುಟುಂಬಕ್ಕೆ ಭರವಸೆ ನೀಡಲಾಗಿದೆ. ತಹಶಿಲ್ದಾರ್ ಮಂಜುನಾಥ್ ಅವರು ಕೆಲಸದ ನಿಮಿತ್ತ ಬೆಂಗಳೂರಿನಲ್ಲಿ ಇರುವುದರಿಂದ ಅವರ ನಿರ್ದೇಶನ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿ ವರ್ಗ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದೆ.

Leave a Reply

Your email address will not be published. Required fields are marked *