ಕಾರ್ಕಳ: ತಾಲೂಕಿನ ಕುಕ್ಕುಂದೂರು ಗ್ರಾಮದ ನಕ್ರೆ ದೇವರ ಗುಡ್ಡೆ ಪ್ರದೇಶದಲ್ಲಿ ವೃದ್ದರೊಬ್ಬರು ಆಕಸ್ಮಿಕವಾಗಿ 30 ಅಡಿ ಆಳದ ಬಾವಿಗೆ ಬಿದ್ದ ಘಟನೆ ನಡೆದಿದೆ.
ಬಾವಿಗೆ ಬಿದ್ದ ವೃದ್ದನನ್ನು ಚಂದು ಪರವ (70 ) ಎಂದು ಗುರುತಿಸಲಾಗಿದೆ.

ಕೈ–ಕಾಲುಗಳಿಗೆ ಪ್ಯಾರಲಿಸಿಸ್ ಇರುವ ಕಾರಣ ಚಲನೆಗೆ ಅಸಹಾಯಕರಾಗಿದ್ದ ಚಂದು ಪರವ ಅವರು ಅಜಾಗರೂಕತೆಯಿಂದ ಬಾವಿಗೆ ಬಿದ್ದಿದ್ದಾರೆ ಎನ್ನಲಾಗಿದೆ. ಮಾಹಿತಿ ತಿಳಿದ ತಕ್ಷಣ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ವೃದ್ದನನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ಸಮಯಕ್ಕೆ ಸರಿಯಾಗಿ ಕಾರ್ಯಾಚರಣೆ ನಡೆಸಿ ವೃದ್ಧನ ಪ್ರಾಣ ಉಳಿಸಿದ ಅಗ್ನಿಶಾಮಕ ಸಿಬ್ಬಂದಿಗಳ ಕಾರ್ಯವನ್ನು ಸ್ಥಳೀಯರು ಶ್ಲಾಘಿಸಿದ್ದಾರೆ.




