Breaking
22 Mar 2026, Sun

ದ.ಕ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ ಕನ್ಯಾಡಿ ಸೇವಾಭಾರತಿ ತಂಡ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ದರ್ಶನ್ ಎಚ್. ವಿ ರವರನ್ನು ಬೆಳ್ತಂಗಡಿಯ ತಾಲೂಕಿನ ಕನ್ಯಾಡಿಯ ಸೇವಾಭಾರತಿ ತಂಡ ಜ. 6 ರಂದು ಭೇಟಿ ಮಾಡಿದೆ.

ಈ ವೇಳೆ ಜಿಲ್ಲಾಧಿಕಾರಿಗಳಿಗೆ ಸೇವಾಭಾರತಿಯ ಸೇವಾಕಾರ್ಯಗಳ ಬಗ್ಗೆ ಮಾಹಿತಿ ನೀಡಿದ ತಂಡದ ಪ್ರಮುಖರು ವಿಕಲಚೇತನರ ಸಬಲೀಕರಣದ ಕುರಿತು ಕುಂದು ಕೊರತೆ ಸಭೆಯನ್ನು ಆಯೋಜಿಸುವ ಬಗ್ಗೆ ಹಾಗೂ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಕನ್ಯಾಡಿಯಲ್ಲಿ ನಿರ್ಮಾಣವಾಗುತ್ತಿರುವ ನೂತನ ಪುನಶ್ಚೇತನ ಕೇಂದ್ರದ ಕಟ್ಟಡದ ಕುರಿತು ಪ್ರಸ್ತಾಪಿಸಿ ಸಹಕರಿಸುವಂತೆ ಮನವಿ ಮಾಡಲಾಯಿತು.

ಈ ಸಂದರ್ಭ ಸೇವಾಧಾಮದ ಸಂಸ್ಥಾಪಕರಾದ ಕೆ ವಿನಾಯಕ ರಾವ್, ಸೇವಾಭಾರತಿಯ ಟ್ರಸ್ಟಿ ಶ್ರೀ ಜೈ ರಾಜ್ ಸಾಲ್ಯಾನ್ ಕಾನರ್ಪ ಹಾಗೂ ಹಿರಿಯ ಪ್ರಬಂಧಕರಾದ ಚರಣ್ ಕುಮಾರ್ ಎಂ ರವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *