ಕಾರ್ಕಳ: ತಾಲೂಕಿನ ಕುಕ್ಕುಂದೂರು ಗ್ರಾಮದ ನಕ್ರೆಯ ಪರಪ್ಪುವಿನ ಮನೆಯೊಂದರಲ್ಲಿ ಕಳ್ಳತನ ಪ್ರಕರಣ ವರದಿಯಾಗಿದೆ.
ಪರಪ್ಪು ನಿವಾಸಿಯಾಗಿರುವ ನಾರಾಯಣ ಮೂಲ್ಯ (41) ಎಂಬವರ ಮನೆಯಲ್ಲಿ ಈ ಕಳ್ಳತನ ಪ್ರಕರಣ ನಡೆದಿದೆ.

ಯಾರೋ ಕಳ್ಳರು ಮುಖ್ಯ ಬಾಗಿಲನ್ನು ತೆರೆದು ಒಳಪ್ರವೇಶಿಸಿ ಬೆಡ್ ರೂಮ್ ನ ಕಪಾಟಿನಲ್ಲಿದ್ದ ಬೆಳ್ಳಿಯ ಸಣ್ಣ ದೀಪ -2, ಬೆಳ್ಳಿಯ ದೊಡ್ಡ ದೀಪ -2, ಬೆಳ್ಳಿಯ ಚೆಂಬು -1 , ಬೆಳ್ಳಿಯ ತಟ್ಟೆ – 1 ಹಾಗೂ 3 ಗ್ರಾಂ ತೂಕದ ಒಂದು ಚಿನ್ನದ ಒಡ್ಡುಂಗುರವನ್ನು ಕಳವು ಮಾಡಿಕೊಂಡು ಹೋಗಿದ್ದಾರೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




