Breaking
25 Sep 2026, Fri

ಸಜೀಪ ಮಾಗಣೆ ಸಂಕೇಶ ಭಂಡಾರರ ಮನೆಯಲ್ಲಿ ಪುದ್ವಾರ್ ಮೆಚ್ಚಿ ಅಂಗವಾಗಿ ಕೋಳಿ ಗುಂಟ

ಬಂಟ್ವಾಳ: ಸಜೀಪ ಮಾಗಣೆ ಸಂಕೇಶ ಭಂಡಾರದ ಮನೆಯಲ್ಲಿ ವರ್ಷಂಪ್ರತಿ ಮಕರ ಸಂಕ್ರಮಣ ಪರ್ವಕಾಲದಲ್ಲಿ ನಡೆಯುವ ಪುದ್ವಾರ್ ಮೆಚ್ಚಿ ಅಂಗವಾಗಿ ಪೂರ್ವಶಿಷ್ಟ ಸಂಪ್ರದಾಯದಂತೆ ಕೋಳಿ ಗುಂಟ ನಡೆಯಿತು.

ಈ ಸಂದರ್ಭದಲ್ಲಿ ಸಜಿಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಕಾಂತಾಡಿ ಗುತ್ತು ಚಂದ್ರಶೇಖರ ನಾಯಕ್ ಬಿಜನ್ದಾರ್ ಗುತ್ತು ಶಿವರಾಮ ಭಂಡಾರಿ, ಸಜೀಪ ಗುತ್ತು ಗಡಿ ಪ್ರಧಾನರಾದ ಮುತ್ತಣ್ಣ ಶೆಟ್ಟಿ ಯಾನೆ ಕಾಳ ಶೆಟ್ಟಿ, ಮಾಡದಾರು ಗುತ್ತು ಗಡಿ ಪ್ರದಾನರಾದ ಶಶಿಧರ ರೈ ಯಾನೆ ನಾರಣ ಆಳ್ವ, ನಗ್ರೀ ಗುತ್ತು ಜಯರಾಮ ಶೆಟ್ಟಿ, ನಗ್ರೀ ಗುತ್ತು ವಿವೇಕ್ ಶೆಟ್ಟಿ, ಶ್ರೀಕಾಂತ್ ಶೆಟ್ಟಿ ಸಂಕೇಶ, ಪಂಚಾಯತ್ ಮಾಜಿ ಅಧ್ಯಕ್ಷ ದೇವಿ ಪ್ರಸಾದ್ ಪೂಂಜ, ಜೀವನ್ ಆಳ್ವ, ಉಮೇಶ ಶೆಟ್ಟಿ, ಗಣೇಶ್ ಶೆಟ್ಟಿ, ಶಂಕರ ಪೂಜಾರಿ ಯಾನೆ ಕೊಚು ಪೂಜಾರಿ, ದಯಾನಂದ ಪೂಜಾರಿ ಯಾನೆ ಕು0ಜ್ಞ ಪೂಜಾರಿ ಮೊದಲಾದ ಗುತ್ತು ಮನೆತನದವರು ಉಪಸ್ಥಿತರಿದ್ದರು.

ಉಳ್ಳಾಲ್ದಿ ದೈವಕ್ಕೆ ಜಿಲ್ಲೆಯಲ್ಲಿ ಹೆಸರುವಾಸಿಯಾದ ಪಾರಂಪರಿಕ ನೇಮವು ಈ ಸಂದರ್ಭದಲ್ಲಿ ನಡೆಯಲಿದೆ.

Leave a Reply

Your email address will not be published. Required fields are marked *