Breaking
24 Jun 2026, Wed

ದೋಣಿಗೆ ಹಗ್ಗವನ್ನು ಕಟ್ಟುವ ವೇಳೆ ಆಕಸ್ಮಿಕವಾಗಿ ನದಿಗೆ ಬಿದ್ದು ಮೀನುಗಾರ ಸಾವು

ಮಂಗಳೂರು: ಮೀನುಗಾರಿಕಾ ದೋಣಿಗೆ ಹಗ್ಗ ಕಟ್ಟುವ ವೇಳೆ ಆಕಸ್ಮಿಕವಾಗಿ ನದಿಗೆ ಬಿದ್ದು ಮೀನುಗಾರನೊಬ್ಬ ಮೃತಪಟ್ಟಿರುವ ಘಟನೆ ಡಿ. 5 ರಂದು ಮಂಗಳೂರು ಬಂದರ್‌ನಲ್ಲಿ ನಡೆದಿದೆ.

ಮೃತಪಟ್ಟವರನ್ನು ಛತ್ತೀಸ್‌ಗಢದ ಜಸ್ಪುರ್ ಜಿಲ್ಲೆಯ ಬರ್ಖಾಸ್ ಪಾಲಿ ಗ್ರಾಮದ ಪ್ರಹ್ಲಾದ್ ಚೌಹಾಣ್ (33) ಎಂದು ಗುರುತಿಸಲಾಗಿದೆ.

ಸುಮಾರು ಒಂದು ವರ್ಷಗಳಿಂದ ಮಂಗಳೂರಿನಲ್ಲಿ ಮೀನುಗಾರಿಕೆ ವೃತ್ತಿಯಲ್ಲಿ ತೊಡಗಿಸಿಕೊಂಡ ಪ್ರಹ್ಲಾದ್ ಅವರು ಜೆಟ್ಟಿಯಲ್ಲಿ ಲಂಗರು ಹಾಕಿದ್ದ ಹಸನ್ ಅಲ್ ಬಹಾರ್ ಎಂಬ ಮೀನುಗಾರಿಕಾ ದೋಣಿಯ ಹಗ್ಗವನ್ನು ಕಟ್ಟುವ ವೇಳೆ ಸಮತೋಲನ ತಪ್ಪಿ ನದಿಗೆ ಬಿದ್ದಿದ್ದಾನೆ ಎನ್ನಲಾಗಿದೆ.

ತಕ್ಷಣವೇ ಅವರನ್ನು ಮೇಲಕ್ಕೆತ್ತಲಾದರೂ ಅಷ್ಟಾರಾಗಲೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ಈ ಕುರಿತು ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *