Breaking
25 Sep 2026, Fri

ಕಥಾಬಿಂದು ಸಾಹಿತ್ಯ ಸಂಭ್ರಮ–2026: ನೀಮಲೋಬೋ ಅವರ “ಕನಸ್ಸೇ ಥ್ಯಾಂಕ್ಯು” ಕಥಾಸಂಕಲನ ಬಿಡುಗಡೆ

ಬಂಟ್ವಾಳ: ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್, ಕಥಾ ಬಿಂದು ಪ್ರಕಾಶನ ಮಂಗಳೂರು, ಅಂತರರಾಷ್ಟ್ರೀಯ ಜೇಸಿಸ್, ಭಯಂಕೇಶ್ವರ ದೇವಸ್ಥಾನ ಪಾಣೆಮಂಗಳೂರು ಇವರ ಸಾರಥ್ಯದಲ್ಲಿ ಕಥಾಬಿಂದು ಸಾಹಿತ್ಯ ಸಂಭ್ರಮ – 2026 ಕಾರ್ಯಕ್ರಮವು ನಡೆಯಿತು.

ಈ ಸಾಹಿತ್ಯ ಸಂಭ್ರಮದಲ್ಲಿ ಉಡುಪಿ ಜಿಲ್ಲೆಯ ಶಂಕರ್ ಪುರ ನಿವಾಸಿಯಾಗಿರುವಂತ ಸಾಹಿತಿ ನೀಮಲೋಬೋ ಅವರು ಬರೆದಿರುವ “ಕನಸ್ಸೇ ಥ್ಯಾಂಕ್ಯು” ಎಂಬ ಕಥಾ ಸಂಕಲನ ಪುಸ್ತಕವನ್ನು ಗಣ್ಯರ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು.

ಸಾಹಿತಿ ನೀಮಲೋಬೋ ಅವರು ಕೇವಲ ಸಾಹಿತಿ ಅಲ್ಲದೆ ವಿವಿಧ ಸಮಾಜ ಸೇವಾ ಕಾರ್ಯಗಳಲ್ಲೂ ತನ್ನನ್ನು ತೊಡಗಿಸಿಕೊಂಡು ಒಂದು ಹೆಜ್ಜೆ ರಕ್ತದಾನಿ ಬಳಗ ಉಡುಪಿ ಜಿಲ್ಲೆಯ ಅಧ್ಯಕ್ಷರಾಗಿಯೂ ಹಾಗೂ “ಸರ್ವಕಲಾ ಸೇವಾ ಟ್ರಸ್ಟ್” ಇದರ ಸ್ಥಾಪಕ ಅಧ್ಯಕ್ಷರಾಗಿಯೂ ತಮ್ಮ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

Leave a Reply

Your email address will not be published. Required fields are marked *