Breaking
25 Sep 2026, Fri

ಹೆಜಮಾಡಿ ಸಮುದ್ರ ತೀರದಲ್ಲಿ ಬೂತಾಯಿ ಮೀನುಗಳ ರಾಶಿ

ಉಡುಪಿ: ಜಿಲ್ಲೆಯ ಕಾಪು ತಾಲೂಕಿನ ಹೆಜಮಾಡಿ ಸಮುದ್ರ ತೀರದಲ್ಲಿ ಬೂತಾಯಿ ಮೀನುಗಳ ರಾಶಿ ಕಂಡು ಬಂದಿದೆ.

ಸಾಂಪ್ರದಾಯಿಕ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಲಕ್ಷಾಂತರ ಬೂತಾಯಿ ಮೀನುಗಳು ಸಮುದ್ರದ ತೀರ ಪ್ರದೇಶಕ್ಕೆ ಜಿಗಿದಿವೆ. ಮೀನಿನ ರಾಶಿಯನ್ನು ಕಂಡು ಸ್ಥಳೀಯ ನಿವಾಸಿಗಳು ಖುಷಿಯಾಗಿದ್ದು, ಕೈಗೆ ಸಿಕ್ಕಿದಷ್ಟು ಮೀನುಗಳನ್ನು ಹಿಡಿದುಕೊಂಡು ಹೋಗಿದ್ದಾರೆ.

ಕಡಲ ತೀರದಲ್ಲಿ ಮೀನುಗಳು ಜಿಗಿಯುತ್ತಿರುವ ಮತ್ತು ಜನರು ಮೀನು ಹಿಡಿದುಕೊಂಡು ಹೋಗುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

Leave a Reply

Your email address will not be published. Required fields are marked *