Breaking
6 May 2026, Wed

ಪರವಾನಿಗೆ ಇಲ್ಲದೆ ಮರ ಸಾಗಾಟ: ಲಾರಿ ಮತ್ತು ಚಾಲಕ ವಶಕ್ಕೆ

ಉಪ್ಪಿನಂಗಡಿ : ನೆಲ್ಯಾಡಿಯ ಅರಣ್ಯ ಇಲಾಖಾಧಿಕಾರಿಗಳ ತಂಡವೊಂದು ಯಾವುದೇ ಪರವಾನಿಗೆ ಇಲ್ಲದೆ ಮರ ಸಾಗಾಟ ಮಾಡುತ್ತಿದ್ದ ಲಾರಿ ಹಾಗೂ ಅದರ ಚಾಲಕನನ್ನು ವಶಪಡಿಸಿಕೊಂಡಿದ್ದಾರೆ.

ಅರಣ್ಯ ಇಲಾಖೆಯ ತಂಡ ರಾತ್ರಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಹಾಸನದ ಕಡೆಯಿಂದ ಬಂಟ್ವಾಳದತ್ತ ಸಾಗುತ್ತಿದ್ದ ಲಾರಿಯನ್ನು ಸಂಶಯದ ಮೇರೆಗೆ ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿ ಸಮೀಪದ ಪೆರಿಯಶಾಂತಿ ಪ್ರದೇಶದಲ್ಲಿ ತಡೆದು ಪರಿಶೀಲನೆ ನಡೆಸಿದಾಗ ಲಾರಿಯಲ್ಲಿದ್ದ ವಿವಿಧ ಕಾಡು ಜಾತಿಗೆ ಸೇರಿದ ಮರದ ದಿಮ್ಮಿಗಳು ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.

ಲಾರಿ ಚಾಲಕ ಸಕಲೇಶಪುರ ನಿವಾಸಿ ಕಾಂತ ಎಚ್.ಎಸ್.(48ವ) ಅವರನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಲಾರಿಯಲ್ಲಿದ್ದ ಕಾಡಿಗೆ ಸಂಬಂಧಿಸಿದ ಮರದ ದಿಮ್ಮಿ ಹಾಗೂ ಲಾರಿಯನ್ನು ಜಪ್ತಿ ಮಾಡಿ ಕಾನೂನು ಕ್ರಮ ಕೈಗೊಂಡಿದ್ದಾರೆ

Leave a Reply

Your email address will not be published. Required fields are marked *