Breaking
24 Jun 2026, Wed

ಉಡುಪಿ: ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಖ್ಯಾತ ಅಂತರರಾಜ್ಯ ಮತ್ತು ಅಂತರ ಜಿಲ್ಲಾ ಕಳ್ಳನನ್ನು ಕಾಫು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಉಮೇಶ್ ಬಳೆಗರ್ ಅಲಿಯಾಸ್ ಉಮೇಶ್ ಪಿ ಅಲಿಯಾಸ್ ಉಮೇಶ್ ರೆಡ್ಡಿ ಎಂದು ಗುರುತಿಸಲಾಗಿದೆ.

ಡಿ. 4 ರಂದು ಹಗಲು ಹೊತ್ತಿನಲ್ಲಿ ಮಲ್ಲಾರ್ ಗ್ರಾಮದ ‘ರಾಮನಾಥ ಕೃಪಾ’ ನಿವಾಸದ ಮಾಲೀಕ ರಾಘವೇಂದ್ರ ಕಿಣಿ ಅವರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕಳ್ಳತನ ನಡೆದಿದೆ.

ಮನೆಯ ಮುಂಭಾಗದ ಬಾಗಿಲಿಗೆ ಹಾಕಿದ್ದ ಕೀಲಿಯನ್ನು ವಿದ್ಯುತ್ ಮೀಟರ್ ಬಾಕ್ಸ್ ಒಳಗೆ ಇಟ್ಟಿದ್ದನ್ನು ಗಮನಿಸಿದ ಕಳ್ಳರು ಅಲ್ಲಿಂದ ಮೀಟರ್ ಬಾಕ್ಸ್ ನಿಂದ ಕೀಲಿ ತೆಗೆದುಕೊಂಡು, ಮುಂಭಾಗದ ಬಾಗಿಲು ತೆರೆದು, ಮನೆಯ ಒಳಗೆ ಪ್ರವೇಶಿಸಿ ಒಳಗಿನಿಂದ ಲಾಕ್ ಮಾಡಿ ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾನೆ.

ಮನೆಯ ಕೋಣೆಯ ಕಪಾಟಿನಿಂದ ಸುಮಾರು 72 ಗ್ರಾಂ ತೂಕದ ಚಿನ್ನಾಭರಣಗಳು, ಸುಮಾರು 3.90 ಲಕ್ಷ ರೂ. ಮೌಲ್ಯದ ಬೆಳ್ಳಿ ವಸ್ತುಗಳು ಮತ್ತು ಸುಮಾರು 1,500 ರೂ. ಮೌಲ್ಯದ ಬೆಳ್ಳಿ ವಸ್ತುಗಳು ಕಳವಾಗಿರುವುದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಘಟನೆಯ ನಂತರ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ನಂತರ ತನಿಖೆ ಕೈಗೊಂಡ ಪೊಲೀಸರು ಜನವರಿ 2 ರಂದು ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯ ವಿರುದ್ದ ಕೇರಳ, ತಮಿಳುನಾಡು ಮತ್ತು ಆಂಧ್ರ ಪ್ರದೇಶದಾದ್ಯಂತ ಪೊಲೀಸ್ ಠಾಣೆಗಳಲ್ಲಿ ಆತನ ವಿರುದ್ಧ ಸುಮಾರು 16 ಪ್ರಕರಣಗಳು ದಾಖಲಾಗಿವೆ ಮತ್ತು ಕರ್ನಾಟಕದ ವಿವಿಧ ಪೊಲೀಸ್ ಠಾಣೆಗಳಲ್ಲಿ ಸುಮಾರು 17 ಪ್ರಕರಣಗಳು ದಾಖಲಾಗಿವೆ. ಅಲ್ಲದೇ ಸುಬ್ರಹ್ಮಣ್ಯ, ಬೆಳ್ತಂಗಡಿ, ಪುತ್ತೂರು ನಗರ ಮತ್ತು ಮೂಡುಬಿದಿರೆ, ಸೇರಿದಂತೆ ಪ್ರಕರಣಗಳು ದಾಖಲಾಗಿದ್ದು ಅವರ ವಿರುದ್ಧ ನ್ಯಾಯಾಲಯಗಳು ಜಾಮೀನು ರಹಿತ ವಾರೆಂಟ್‌ಗಳನ್ನು ಹೊರಡಿಸಿವೆ.

Leave a Reply

Your email address will not be published. Required fields are marked *