ಬಂಟ್ವಾಳ: ಮಂಗಳೂರಿನ ಫಾದರ್ ಮುಲ್ಲರ್ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರ ಮಟ್ಟದ ಮುಕ್ತ ಕರಾಟೆ ಪಂದ್ಯಾಟದಲ್ಲಿ ಮೊಡಂಕಾಪು ಕಾರ್ಮೆಲ್ ಸಂಯುಕ್ತ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಾದ ಅನುಷಾ, ಶರೋನ್ ಡಿಸೋಜ , ಶರ್ಲಿನ್ ಡಿಸೋಜ ,ಅನ್ವಿತ್ ಆರ್ ,ಅಲ್ತಾಫ್ ,ಶಮಂತ್ ಆಚಾರ್ಯ,ಅಫೀಜಾ ಅವರು ಭಾಗವಹಿಸಿ ಕಟಾ ಹಾಗೂ ಕಮಿಟೆ ಕಲರ್ ಬೆಲ್ಟ್ ವಿಭಾಗದಲ್ಲಿ ಮೂರು ಚಿನ್ನ ಮೂರು ಬೆಳ್ಳಿ ಹಾಗೂ ಐದು ಕಂಚಿನ ಪದಕಗಳನ್ನು ಪಡೆದಿದ್ದಾರೆ.

ವಿದ್ಯಾರ್ಥಿಗಳಿಗೆ ಕರಾಟೆ ತರಬೇತುದಾರರಾದ ಶೆನ್ಶಿ ಜೆರಾಲ್ಡ್ ಫೆರ್ನಾಂಡಿಸ್ ಪೆದಮಲೆ ಅವರು ಮಾರ್ಗದರ್ಶನವನ್ನು ನೀಡಿದ್ದರು.
ವಿಜೇತ ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಂಶುಪಾಲರಾದ ಭಗಿನಿ ಫೆಲ್ಸಿಟ ,ಮುಖ್ಯ ಶಿಕ್ಷಕಿ ಭಗೇನೆ ವೀರಾ ,ದೈಹಿಕ ಶಿಕ್ಷಣ ಶಿಕ್ಷಕರಾದ ಸುರೇಶ್ ವೈ ಎಸ್ , ಸುರೇಶ್ ನಂದೊಟ್ಟು ರೋಷನ್ ಪಿಂಟೊ ಅವರು ಅಭಿನಂದಿಸಿದರು .




