Breaking
9 May 2026, Sat

ಗೂಡ್ಸ್ ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ಮನೆಯೊಂದಕ್ಕೆ ಡಿಕ್ಕಿ

ಉಡುಪಿ: ಗೂಡ್ಸ್ ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ಮನೆಯೊಂದಕ್ಕೆ ಡಿಕ್ಕಿ ಹೊಡೆದ ಘಟನೆ ಹೆಜಮಾಡಿ ಕಣ್ಣಂಗಾರ್ ಗರೋಡಿ ಸಮೀಪ ನಡೆದಿದೆ.

ಪಡುಬಿದ್ರಿಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದಗೂಡ್ಸ್ ಟೆಂಪೋದಲ್ಲಿ ತಾಂತ್ರಿಕ ದೋಷ ಉಂಟಾದ ಕಾರಣ ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ಬದಿಯಲ್ಲಿದ್ದ ಮಂಜತೋಟ ಇಸ್ಮಾಯಿಲ್ ಎಂಬುವವರಿಗೆ ಸೇರಿದ ಮನೆಗೆ ಡಿಕ್ಕಿ ಹೊಡೆದಿದೆ.

ಅಪಘಾತದ ಸಮಯದಲ್ಲಿ ಮನೆಯ ನಿವಾಸಿಗಳು ಮನೆಯ ಒಂದು ಮೂಲೆಯಲ್ಲಿ ಕುಳಿತಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಆದರೆ, ವಾಹನ ಡಿಕ್ಕಿ ಹೊಡೆದ ರಭಸಕ್ಕೆ ಮನೆಯ ಒಂದು ಭಾಗವು ಭಾಗಶಃ ಹಾನಿಗೊಳಗಾಗಿದೆ.

Leave a Reply

Your email address will not be published. Required fields are marked *