Breaking
19 Sep 2026, Sat

ಆಟೋ ರಿಕ್ಷಾವನ್ನು ಕಳವುಗೈದ ಆರೋಪಿಯ ಬಂಧನ

ಉಳ್ಳಾಲ: ಚೋಟಾ ಮಂಗಳೂರು ಭಗವತಿ ರಸ್ತೆಯಲ್ಲಿ ನಿಲ್ಲಿಸಲಾಗಿದ್ದ ಆಟೋ ರಿಕ್ಷಾ ವನ್ನು ಕಳವುಗೈದ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಅಕ್ಕರೆ ಕೆರೆ ನಿವಾಸಿ ಮುಹಮ್ಮದ್ ಶಾಝಿಲ್ (29) ಎಂದು ಗುರುತಿಸಲಾಗಿದೆ.

ಡಿ.13ರಂದು ನರೇಂದ್ರ ಕುಮಾರ್ ಅವರು ತಮ್ಮ ಆಟೋ ರಿಕ್ಷಾವನ್ನು ತಮ್ಮ ಮನೆಯ ಕಂಪೌಂಡ್ ನ ಹೊರಭಾಗದಲ್ಲಿರುವ ಭಗವತಿ ರಸ್ತೆಯಲ್ಲಿ ನಿಲ್ಲಿಸಿದ್ದರು. ಮರುದಿನ ಬೆಳಿಗ್ಗೆ ರಿಕ್ಷಾ ಕಳುವಾಗಿದ್ದು ಬೆಳಕಿಗೆ ಬಂದಿದೆ. ಈ ಕುರಿತು ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಬಳಿಕ ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತನಿಂದ ಪೊಲೀಸರು ಕಳವುಗೈದ ಆಟೋ ರಿಕ್ಷಾವನ್ನು ವಶಪಡಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *