ಸಿದ್ದಕಟ್ಟೆ: ಸಿದ್ದಕಟ್ಟೆ ಯನ್ನು ಕೇಂದ್ರ ವನ್ನಾಗಿಸಿಕೊಂಡು ಸುತ್ತ ಮುತ್ತಲಿನ ಹತ್ತಾರು ಗ್ರಾಮ ಗಳಲ್ಲಿ ತನ್ನದೇ ಆದ ವೈಶಿಷ್ಟ್ಯ ಪೂರ್ಣ ಸಾಮಾಜಿಕ ಚಟುವಟಿಕೆಗಳ ಮೂಲಕ ಕಾರ್ಯ ನಿರ್ವಹಿಸುತ್ತಿರುವ ರೋಟರಿ ಕ್ಲಬ್ ಸಿದ್ಧಕಟ್ಟೆ ಫಲ್ಗುಣಿ…ಇದೀಗ ನವೆಂಬರ್ 14 ರಂದು ಮಕ್ಕಳ ದಿನಾಚರಣೆಯನ್ನು ವಿಶಿಷ್ಟ ವಾಗಿ ಆಚರಿಸಿ ಜನ ಮನ್ನಣೆಗೆ ಪಾತ್ರವಾಗಿದೆ.
ರಾಯಿ, ಸಿದ್ಧಕಟ್ಟೆ, ಕುಕ್ಕಿಪಾಡಿ, ಎಲಿಯನಡುಗೋಡು, ಆರಂಬೋಡಿ, ಗುಂಡೂರಿ, ಬಜಿರೆ, ವೇಣೂರು,ಹೊಸಂಗಡಿ, ಕೆರೆಬಳಿ , ಸಂಗಬೆಟ್ಟು, ತಾಕೋಡೆ, ಕರ್ಪೆ ಪ್ರದೇಶದ ಒಟ್ಟು 31 ಅಂಗನವಾಡಿ ಕೇಂದ್ರಗಳಲ್ಲಿ ರೋಟರಿ ಕ್ಲಬ್ ಸಿದ್ಧಕಟ್ಟೆ ಫಲ್ಗುಣಿ ಇದರ ಸದಸ್ಯರ ಪ್ರಾಯೋಜಕತ್ವದಲ್ಲಿ ಅಂಗನವಾಡಿ ಕೇಂದ್ರಗಳ ಸಹಕಾರದೊಂದಿಗೆ ಅರ್ಥ ಪೂರ್ಣವಾಗಿ ಆಚರಿಸಲಾಯಿತು.
ಮಕ್ಕಳ ದಿನಾಚರಣೆಯ ಪ್ರಯುಕ್ತ ಮಕ್ಕಳಿಗೆ ಆಟೋಟ ಸ್ಪರ್ಧೆಗಳು, ಮಕ್ಕಳ ಹಕ್ಕುಗಳ ಜಾಗೃತಿ, ಪೋಷಕರ ಜವಾಬ್ದಾರಿಗಳ ಬಗ್ಗೆ ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ಮಾಹಿತಿ ನೀಡಲಾಯಿತು..ಮಕ್ಕಳಿಗೆ ಬಹುಮಾನ, ಸಿಹಿ ತಿಂಡಿ, ಆಕರ್ಷಣೀಯ ಗಿಫ್ಟ್ ಗಳನ್ನು ನೀಡಲಾಯಿತು..
ರೊಟರಿಯ ಪ್ರತೀ ಸದಸ್ಯರು ತಲಾ ಒಂದು ಅಂಗನವಾಡಿಯಲ್ಲಿ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಆರ್ಥಿಕ ಸಹಕಾರ ನೀಡಿದರು..
ಕಳೆದ ವರ್ಷ ರೋಟರಿ ಕ್ಲಬ್ ವತಿಯಿಂದ ಎಲ್ಲ ಅಂಗನವಾಡಿ ಕೇಂದ್ರಗಳಿಗೆ ಪ್ರಥಮ ಚಿಕಿತ್ಸಾ ಪೆಟ್ಟಿಗೆ ವಿತರಿಸಲಾಗಿತ್ತು.ಜೊತೆಗೆ ಅಂಗನವಾಡಿಗಳಿಗೆ ಅಗತ್ಯ ಇರುವ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು ರೋಟರಿ ಜಿಲ್ಲೆ 3181 ನ 2024/25 ರ ಬಹುಮುಖ್ಯ ಕಾರ್ಯಕ್ರಮ ವಾದ ಅಂಗನವಾಡಿಗಳ ಬಲವರ್ಧನೆಯ ಕಾರ್ಯವನ್ನು ರೋಟರಿ ಕ್ಲಬ್ ಸಿದ್ಧಕಟ್ಟೆ ಯು ಅತ್ಯಂತ ಪರಿಣಾಮಕಾರಿಯಾಗಿ ನಿರ್ವಹಿಸುತ್ತಿದೆ..