Breaking
23 Mar 2026, Mon

ಗೇರುಕಟ್ಟೆ ಕಲ್ಲಡ್ಕ ಉಮಾಶಿವ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ರುದ್ರ ನಮಕ ಚಮಕ ವೇದ ಸೂಕ್ತ ಪಾರಾಯಣ

ಬಂಟ್ವಾಳ: ಶ್ರೀ ರುದ್ರ ಪಾರಾಯಣ ಸಮಿತಿ, ಬಂಟ್ವಾಳ ಇವರ ವತಿಯಿಂದ ಗೇರುಕಟ್ಟೆ ಕಲ್ಲಡ್ಕ ಶ್ರೀ ಉಮಾಶಿವ ದೇವಸ್ಥಾನದ ಶ್ರೀ ಕ್ಷೇತ್ರದಲ್ಲಿ ಸಾಮೂಹಿಕ ಶ್ರೀ ರುದ್ರ ನಮಕ ಚಮಕ, ಸೌರ ಸೂಕ್ತ, ಗಣಪತಿ ಸೂಕ್ತ , ದುರ್ಗಾ ಸೂಕ್ತ , ಸೌರ ಸೂಕ್ತ, ಸ್ವಸ್ತಿ ಸೂಕ್ತ, ಐಕಮತ್ಯಸೂಕ್ತ, ಮಂತ್ರ ಪುಷ್ಪ ಭಾಗ್ಯ ಸೂಕ್ತ, ದೇವಿ ಸೂಕ್ತ ಮಂತ್ರ ಪಠಣ ಇಂದು (ಡಿ. 22) ನಡೆಯಿತು.

ಈ ಸಂದರ್ಭದಲ್ಲಿ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಎ.ರವಿಶಂಕರಮಯ್ಯ, ಅರ್ಚಕ ರಾಜೇಶ್ ಭಟ್, ಎಂ ಶಾಂತರಾಮ ರಾವ್, ಪ್ರಕಾಶ್ ಭಟ್, ಎನ್ ರಾಮಚಂದ್ರಮಯ್ಯ, ಕೆ ಮಿಥುನ್ ರಾವ್, ಕೆ ರಮೇಶ ಹೊಳ್ಳ, ಚಂದ್ರಮೋಹನ ರಾವ್, ವಿಶಾಲ್ ಹೆಗಡೆ, ಕೆ ರಾಜಾರಾಮ ಐತಾಳ್, ಆಡಳಿತ ಸಮಿತಿ ಅಧ್ಯಕ್ಷ ರಾಕೋಡಿ ಈಶ್ವರ ಭಟ್ , ಟ್ರಸ್ಟಿ ಯತಿನ್ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *