Breaking
11 Aug 2026, Tue

14 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ : ಆರೋಪಿಯ ಬಂಧನ

ಕಾಸರಗೋಡು: 14 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪದ ಮೇರೆಗೆ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಸಾಜಿದ್ (39) ಎಂದು ಗುರುತಿಸಲಾಗಿದೆ.

ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸಿಸುವ ಬಾಲಕಿಯ ತಾಯಿ ಮತ್ತು ಸಾಜಿದ್ ಸ್ನೇಹಿತರಾಗಿದ್ದರು.ಈ ಸಂಬಂಧದ ಹೆಸರಿನಲ್ಲಿ ಬಾಲಕಿಯ ಮನೆಗೆ ಬರುತ್ತಿದ್ದ ಸಾಜಿದ್, ಬಾಲಕಿಯ ಮೇಲೆ ಹಲವಾರು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ.

ಬಾಲಕಿ ಈ ವಿಷಯವನ್ನು ಭಯದಿಂದ ಮನೆಯಲ್ಲಿ ಯಾರಿಗೂ ಹೇಳಿರಲಿಲ್ಲ. ಆದರೆ ಈ ಘಟನೆಯ ಬಗ್ಗೆ ತನ್ನ ಆಪ್ತ ಸ್ನೇಹಿತರು ಮತ್ತು ಶಿಕ್ಷಕರಿಗೆ ತಿಳಿಸಿದ್ದಳು ಎಂದು ತಿಳಿದು ಬಂದಿದೆ. ಚೈಲ್ಡ್ ಲೈನ್ ಮೂಲಕ ಪೊಲೀಸರಿಗೆ ದೂರು ತಲುಪಿದ್ದು, ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *