Breaking
26 Sep 2026, Sat

ಬೈಕ್ ಗೆ ಡಿಕ್ಕಿ ಹೊಡೆದ ಖಾಸಗಿ ಬಸ್ : ಸವಾರ ಸಾವು

ಉಡುಪಿ: ಖಾಸಗಿ ಬಸ್ಸೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಸವಾರರೊಬ್ಬರು ಮೃತಪಟ್ಟ ಘಟನೆ ಬ್ರಹ್ಮಾವರ ಹಂದಾಡಿ ಗ್ರಾಮದ ಅಂಬಿಕಾ ಪಾರಂ ಬಳಿ ಡಿ.19ರಂದು ನಡೆದಿದೆ.

ಮೃತರನ್ನು ಪವನ್ ಎಂದು ಗುರುತಿಸಲಾಗಿದೆ.

ಪವನ್ ತನ್ನ ಬೈಕಿನಲ್ಲಿ ಬಾರ್ಕೂರು ಕಡೆಯಿಂದ ಬ್ರಹ್ಮಾವರ ಕಡೆ ರಸ್ತೆಯಲ್ಲಿ ಬಂದು, ಬಲಗಡೆ ಇಂಡಿಕೇಟರ್ ಹಾಕಿ ಅಂಬಿಕಾ ಫಾರಂ ಬಳಿಯ ಅಮ್ಮ ಶಾಮಿಯಾನ್ ಅಂಗಡಿ ಕಡೆಗೆ ತಿರುಗಿಸುತ್ತಿದ್ದಾಗ ಅದೇ ರಸ್ತೆಯಲ್ಲಿ ಬರುತ್ತಿದ್ದ ಬಸ್, ಬೈಕಿಗೆ ಹಿಂದಿನಿಂದ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡಿದ್ದು,ಅದಾಗಲೇ ಅವರನ್ನು ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *