Breaking
21 Jun 2026, Sun

ಮಾದಕ ವಸ್ತು ಸೇವನೆ ಆರೋಪ : ಯುವಕ ಅರೆಸ್ಟ್

ಮಂಗಳೂರು: ನಗರದ ಬೋಳೂರಿನಲ್ಲಿ ಮಾದಕ ವಸ್ತು ಸೇವಿಸಿದ ಆರೋಪದ ಮೇಲೆ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ವ್ಯಕ್ತಿಯನ್ನು ಬೊಳೂರು ನಿವಾಸಿ ಅಂಕಿತ್ ಎಂದು ಗುರುತಿಸಲಾಗಿದೆ.

ಗಸ್ತು ನಿರತ ಪೊಲೀಸರು ಅಮಲಿನಲ್ಲಿದ್ದಂತೆ ಕಂಡು ಬಂದ ಅಂಕಿತ್‌ನನ್ನು ಹಿಡಿದು ವಿಚಾರಿಸಿದಾಗ ಆತ ಮಾತನಾಡಲು ತಡವರಿಸಿದ್ದು, ಬಳಿಕ ತಪ್ಪೊಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಬಳಿಕ ಯುವಕನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ.

ಈತನ ವಿರುದ್ಧ ಎನ್‌ಡಿಪಿಎಸ್‌ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *