Breaking
23 Mar 2026, Mon

ಸಾವ೯ಜನಿಕ ರಸ್ತೆಗೆ ಮಾಣಿ ಲಯನ್ಸ್ ಕ್ಲಬ್ ನಿಂದ ನಾಮಫಲಕ ಅನಾವರಣ

ಬಂಟ್ವಾಳ: ಶ್ರೀ ರಾಮಚಂದ್ರಾಪುರ ಮಠದ ಹತ್ತಿರದ, ಪೆರಾಜೆಯ ಮೂರು ಮಾರ್ಗಸೇರುವ ರಸ್ತೆಯಲ್ಲಿ ಸಾರ್ವಜನಿಕರ ಹಿತದೃಷ್ಠಿಯಿಂದ ಅಳವಡಿಸಲಾದ ಸೂಚನಾ ಫಲಕವನ್ನು ಲಯನ್ಸ್ ಕ್ಲಬ್ ಪ್ರಾಂತೀಯ ಅಧ್ಯಕ್ಷರಾದ ಲ|| ಬಾಲಕೃಷ್ಣ ಶೆಟ್ಟಿ ಪಾಂಡಿಬೆಟ್ಟು ಅನಾವರಣಗೊಳಿಸಿದರು.

ಈ ಸಂದರ್ಭದಲ್ಲಿ ಮಾಣಿ ಲಯನ್ಸ್ ಕ್ಲಬ್‌ನ ಜನಹಿತದ ಸೇವಾ ಕಾರ್ಯವನ್ನು ಶ್ಲಾಘಿಸಿದರು.

ಈ ವೇಳೆ ಮಾಣಿ ಲಯನ್ಸ್ ಕ್ಲಬ್ ಅಧ್ಯಕ್ಷ ಜನಾರ್ದನ ಪೆರಾಜೆ ,ನಿಕಟಪೂರ್ವ ಅಧ್ಯಕ್ಷ ರಾಮ್ ಕಿಶನ್ , ಸ್ಥಾಪಕ ಅಧ್ಯಕ್ಷ ಗಂಗಾಧರ ರೈ, ಕಾರ್ಯದರ್ಶಿ ರತ್ನಾಕರ ರೈ , ಕೋಶಾಧಿಕಾರಿ ರಾಜೇಶ್ ಶೆಟ್ಟಿ, ಸದಸ್ಯರಾದ ಸಚ್ಚಿದಾನಂದ ರೈ ಪಾಳ್ಯ, ಅನಿಲ್ ಕುಮಾರ್, ಹರೀಶ್ ಕುಲಾಲ್, ನಾರಾಯಣ ಸಾಲ್ಯಾನ್ , ಕಾರ್ಯಕ್ರಮ ನಿರ್ದೇಶಕ ಜಯಾನಂದ ಪೆರಾಜೆ ಮೊದಲಾದವರು ಉಪಸ್ಥಿತರಿದ್ದರು.

ಅಂತಾರಾಷ್ಟ್ರೀಯ ಸೇವಾ ಸಂಸ್ಥೆ ಲಯನ್ಸ್ ಕ್ಲಬ್ ಮಾಣಿ ವತಿಯಿಂದ ಸಾಯಿ ಗಣೇಶ್ ಇವರ ಪ್ರಯೋಜಕತ್ವದಲ್ಲಿ ನಿರ್ಮಾಣವಾದ ಫಲಕದಲ್ಲಿ ಮಾಣಿ ಮಠದಿಂದ ವಿವಿಧ ಪ್ರಮುಖ ಸ್ಥಳಗಳ ಹೆಸರು ಮತ್ತು ದೂರವನ್ನು ತಿಳಿಸಲಾಗಿದ್ದು ಸಾರ್ವಜನಿಕರಿಗೆ ಉತ್ತಮ ಮಾಹಿತಿಯನ್ನು ಒದಗಿಸಲಾಗಿದೆ.

Leave a Reply

Your email address will not be published. Required fields are marked *