Breaking
26 Jun 2026, Fri

ಸಜೀಪ ಮೂಡ ಶ್ರೀ ಬಾಲ ಗಣಪತಿ ದೇವಸ್ಥಾನದಲ್ಲಿ ಡಿ.28–29ರಂದು ಜಾತ್ರಾ ಉತ್ಸವದ ಪೂರ್ವಭಾವಿ ಸಭೆ

ಬಂಟ್ವಾಳ: ಸಜೀಪ ಮೂಡ ಶ್ರೀ ಕ್ಷೇತ್ರವಾದ ಶ್ರೀ ಬಾಲ ಗಣಪತಿ ದೇವಸ್ಥಾನ ಅನ್ನಪಾಡಿಯಲ್ಲಿ ಬ್ರಹ್ಮಶ್ರೀ ನಿಲೇಶ್ವರ ಕೆ ಉಚ್ಚಿಲತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಶ್ರೀ ಬಾಲ ಗಣಪತಿ ಮೂಲ ಮಂತ್ರ ಲಕ್ಷ ಜಪ ಯಜ್ಞ ದೂರ್ವ ಹೋಮ ಮತ್ತು ಚತುರ್ಥ ಪ್ರತಿಷ್ಠ ವರ್ಧಂತಿ ಹಾಗೂ ವಾರ್ಷಿಕ ಜಾತ್ರಾ ಉತ್ಸವವು ಡಿ. 28 ಹಾಗೂ 29 ರಂದು ನಡೆಯಲಿದ್ದು ಇದರ ಪೂರ್ವಭಾವಿ ಸಿದ್ಧತಾ ಸಭೆಯು ನಡೆಯಿತು.

ಈ ಸಭೆಯು ಆಡಳಿತ ಸಮಿತಿ ಅಧ್ಯಕ್ಷ ಯಶವಂತ ದೇರಾಜೆ ಅಧ್ಯಕ್ಷತೆಯಲ್ಲಿ ಜರುಗಿತು.

ಸಭೆಯಲ್ಲಿ ಸಜೀಪ ಮಾಗಣೆತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಶಂಕರನಾರಾಯಣ ಐತಾಳ್ ಓಣಿ ಬೈಲ, ಹರೀಶ್ ಬಂಗೇರ, ದೀಪಕ್ ಕೋಟ್ಯಾನ, ಸುರೇಶ್ ಬಂಗೇರ , ರಮೇಶ ಅನ್ನಪಾಡಿ , ಪ್ರಶಾಂತ್, ಭಾಸ್ಕರ , ಸತೀಶ, ಲಿಂಗಪ್ಪ ಧೊಟ, ದಿನೇಶ್, ಮೊದಲಾದವರು ಸೂಕ್ತ ಸಲಹೆ ಸೂಚನೆ ನೀಡಿದರು.

26 ಶುಕ್ರವಾರದಂದು ಸಜೀಪ ಮೂಡ, ಸಜೀಪ ಮುನ್ನುರು, ಸಜೀಪ ನಡು, ಸಜೀಪ ಪಡು ಗ್ರಾಮಗಳಿಂದ ಹಸಿರು ವಾಣಿ ಹೊರೆ ಕಾಣಿಕೆ ಮೆರವಣಿಗೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

Leave a Reply

Your email address will not be published. Required fields are marked *