Breaking
23 Mar 2026, Mon

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಾಳೆಪುಣಿ ಒಕ್ಕೂಟದ ವಾರ್ಷಿಕೋತ್ಸವ

ಉಳ್ಳಾಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಾಳೆಪುಣಿ ಒಕ್ಕೂಟದ ವಾರ್ಷಿಕೋತ್ಸವವು ಧರ್ಮರಸು ಶ್ರೀ ತೋಡಕುಕ್ಕಿನಾರ್ ದೈವಸ್ಥಾನ ಕಣಂತೂರು ಇಲ್ಲಿ ಡಿ.14ರಂದು ನಡೆಯಿತು.

ಪ್ರಗತಿ ಬಂದು ಸ್ವ-ಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ನವೀನ್ ಚಂದ್ರ ಕಣಂತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಧರ್ಮರಸು ತೋಡಕ್ಕುಕ್ಕಿನಾರ್ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀದೇವಿ ಪ್ರಸಾದ್ ಪೊಯ್ಯತ್ತಾಯರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ, ಬಾಬು ನಾಯ್ಕ, ತಾಲೂಕು ಯೋಜನಾಧಿಕಾರಿ ಸುರೇಶ್ ಗೌಡ, ಧರ್ಮರಸು ಶ್ರೀ ತೊಡಕುಕ್ಕಿನಾರ್ ದೈವಸ್ದಾನದ ಅನುವಂಶಿಕ ಆಡಳಿತ ಮೊಕ್ತೇಸರರು ಮಂಜು ಭಂಡಾರಿ, ನಿಕಟ ಪೂರ್ವ ಅಧ್ಯಕ್ಷ ನವೀನ್ ಪಾದಲ್ಪಾಡಿ,ಬಾಲಕೃಷ್ಣ ಕಾರಂತ, ತಾಲೂಕಿನ ಎಲ್ಲಾ ವಲಯದ ಅಧ್ಯಕ್ಷರು,ವಲಯ ಮೇಲ್ವಿಚಾರಕರು ವಿಪತ್ತು‌ ನಿರ್ವಹಣಾ ಅಧ್ಯಕ್ಷರು ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *