Breaking
23 Mar 2026, Mon

ಬೆಂಗಳೂರು ರುಕ್ಸ್ ವೈಯರ್ಲೆಸ್ ಪ್ರೈವೇಟ್ ಲಿಮಿಟೆಡ್ ನ CSR ಅನುದಾನದಿಂದ ಸೇವಾಧಾಮದಲ್ಲಿ 5kw ಸೋಲಾರ್ ಅಳವಡಿಕೆ

ಬೆಂಗಳೂರು: ರುಕ್ಸ್ ವೈಯರ್ಲೆಸ್ ಪ್ರೈವೇಟ್ ಲಿಮಿಟೆಡ್ ನ CSR ಅನುದಾನದಿಂದ ಸೌತಡ್ಕದ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರ ಪುನಶ್ಚೇತನ ಕೇಂದ್ರ ಸೇವಾಧಾಮದಲ್ಲಿ 5kw ಸೌರ ವಿದ್ಯುತ್(Solar) ವ್ಯವಸ್ಥೆಯನ್ನು ಅಳವಡಿಸಲಾಗಿದೆ.

ಈ ನೂತನ ವ್ಯವಸ್ಥೆ ಕಲ್ಪಿಸಿದ ಕಂಪನಿಯ ಟ್ರೇಡ್ ಕಂಪ್ಲೈನ್ಸ್ ನ ಸೀನಿಯರ್ ಮ್ಯಾನೇಜರ್ ನವೀನ್ ಕುಮಾರ್ ವಜ್ರವೇಲು, ಎಚ್ಆರ್ ಮ್ಯಾನೇಜರ್ ತಂಗಮಣಿ ನಟರಾಜನ್ ಮತ್ತು ಐಟಿ ಮ್ಯಾನೇಜರ್ ಸುನಿಲ್ ಕುಮಾರ್ ರವರನ್ನು ಸೇವಾಧಾಮದ ಸಂಸ್ಥಾಪಕರಾದ ಕೆ ವಿನಾಯಕ ರಾವ್ ಮತ್ತು ತಂಡವು ಡಿ.16 ರಂದು ಭೇಟಿ ಮಾಡಿ ಸಂಸ್ಥೆಯ ಪರವಾಗಿ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸಿದರು.

Leave a Reply

Your email address will not be published. Required fields are marked *