ಬಂಟ್ವಾಳ : ಬಿ. ಸಿ. ರೋಡಿನ ಶಾಂತಿ ಅಂಗಡಿಯ ನುಸ್ ರತ್ ಮಿಲಾದುನ್ನಭಿ ಸಂಘ (ರಿ) ಇದರ ವಾರ್ಷಿಕ ಮಹಾಸಭೆಯು ಮುಹಿಯುದ್ದೀನ್ ಜುಮಾ ಮಸೀದಿ ಮಿತ್ತ ಬೈಲ್ ಇದರ ಮುದರ್ರಿಸರಾದ ಬಹು ಉಮರುಲ್ ಫಾರೂಕ್ ಫೈಝಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಭೆಯಲ್ಲಿ ಗೌರವ ಅಧ್ಯಕ್ಷರಾಗಿ ಮುಹಮ್ಮದ್ ಮಜಲ್, ಅಧ್ಯಕ್ಷರಾಗಿ ಅಬ್ದುಲ್ ರಹ್ಮಾನ್ , ಶಾಂತಿ ಅಂಗಡಿ ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಅಶ್ರಫ್ , ಕೋಶಧಿಕಾರಿಯಾಗಿ ಅಬೂಬಕ್ಕರ್ ಕರಾವಳಿ, ಉಪಾಧ್ಯಕ್ಷರಾಗಿ ಸಾಹುಲ್ ಅದ್ದೇಡಿ, ಸಾದಿಕ್ ತಾಳಿಪಡ್ಪು, ಜೊತೆ ಕಾರ್ಯದರ್ಶಿಯಾಗಿ ಆದಂ ಪಲ್ಲ, ಇಸ್ಮಾಯಿಲ್ ಪಲ್ಲ , ಲೆಕ್ಕ ಪರಿಶೋಧಕರಾಗಿ ಹಮೀದ್ ಪಲ್ಲ ಹಾಗೂ ಕಾರ್ಯಕಾರಿ ಸಮಿತಿಗೆ 12 ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಅಶ್ರಫ್ ಎಸ್ ಸ್ವಾಗತಿಸಿ, ಇಸ್ಮಾಯಿಲ್ ಪಲ್ಲ ಧನ್ಯವಾದವಿತ್ತರು.




