ಕಾವೂರು: ಧನು ಸಂಕ್ರಮಣ ಪರ್ವಕಾಲದ ಅಂಗವಾಗಿ ಕಾವೂರು ಶ್ರೀ ಕ್ಷೇತ್ರದ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ರುದ್ರ ಚಮಕ ನಮಕ, ರುದ್ರ ಸೂಕ್ತ, ದೇವಿ ಸೂಕ್ತ, ಭಾಗ್ಯ ಸೂಕ್ತ, ಸ್ವಸ್ತಿ ಸೂಕ್ತ, ದುರ್ಗಾ ಸೂಕ್ತ , ಗಣಪತಿ ಸೂಕ್ತ, ಮಂತ್ರ ಪುಷ್ಪ ಪಾರಾಯಣ ಮಂತ್ರ ಪಠಣ ನಡೆಯಿತು.

ಈ ಸಂದರ್ಭದಲ್ಲಿ ಸಜೀಪ ಮಾಗಣೆತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಎ ರವಿಶಂಕರ ಮೈಯ್ಯ ಶಾಂತ ರಾಮರಾವ್, ರಾಮಚಂದ್ರಮಯ್ಯ, ಚಂದ್ರಮೋಹನರಾವ್, ಎಂ ಜಯರಾಮ ಮಯ್ಯ, ಲಕ್ಷ್ಮೀಶರಾವ್,0ಕೆ ಮಿಥುನರಾವ್, ಪ್ರಸಾದ್ ಭಟ್ ಪದ್ಮನಾಭ ರಾವ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.





