ಬಂಟ್ವಾಳ: ನೆತ್ತರಕೆರೆ ಸಮೀಪದ ಗೋವಿಂ ತೋಟದಲ್ಲಿರುವ ರಾಧ ಸುರಭಿ ಗೋಮಂದಿರದಲ್ಲಿ ತಯಾರಿಸಿದ ಹೊಸ “ಕುಕ್ಕುಬ್” ಪಾನೀಯವನ್ನು ಇಂದು (ಡಿ .12) ರಂದು ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು.

ಶ್ರೀ ಕ್ಷೇತ್ರದಲ್ಲಿ ಶ್ರೀ ಸಿದ್ಧರೂಡ ಮಿಷನ್ ನ ಅಧ್ಯಕ್ಷರಾದ ಡಾ. ಆರೂಢ ಭಾರತೀ ಸ್ವಾಮೀಜಿಯವರು ಈ ತಂಪು ಪಾನೀಯ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಸುಳ್ಯ ಮರ್ಕಂಜದ ಅನ್ನಪೂರ್ಣೇಶ್ವರೀ ಕ್ಷೇತ್ರ ಯೋಗೀಶ್ವರ ಸಿದ್ಧಮಠದ ಧರ್ಮದರ್ಶಿ ರಾಜೇಶ್ ನಾಥ್ ಜಿ, ರಾಧ ಸುರಭಿ ಗೋ ಮಂದಿರದ ಅಧ್ಯಕ್ಷರಾದ ಭಕ್ತಿ ಭುಷಣ್ ಜಿ, ಸಂಸ್ಕಾರ ಭಾರತಿ ಜಿಲ್ಲಾ ಉಪಾಧ್ಯಕ್ಷ ಅನಿಲ್ ಪಂಡಿತ್ , ಕರ್ನಾಟಕ ಪ್ರಾಂತ ಗೋ ಸೇವಾ ಗತಿವಿಧಿ ಸಂಯೋಜಕ, ಪ್ರವೀಣ್ ಸರಳಾಯ, ಮಂಗಳೂರು ವಿಭಾಗ ಬಾಲಗೋಕುಲಾ ಟೋಲಿ ಸದಸ್ಯ ದಾಮೋದರ ನೆತ್ತರಕೆರೆ ಶುಭ ಹಾರೈಸಿದರು.

ಈ ಕುಕುಬ್ ಪಾನಿಯವನ್ನು ಜನರ ಆರೋಗ್ಯ ದೃಷ್ಟಿಯಿಂದ ಗೋ ಉತ್ಪನ್ನಗಳನ್ನು ಹಾಗೂ 12 ಬಗೆಯ ಗಿಡಮೂಲಿಕೆಗಳನ್ನು ಬಳಸಿ ತಯಾರಿಸಲಾಗಿದ್ದು, ಸಕ್ಕರೆಯ ಬದಲಾಗಿ ಕಲ್ಲು ಸಕ್ಕರೆ ಬಳಸಲಾಗಿದೆ. ಇದು ರಸಾಯನಿಕ ಮುಕ್ತ ಪಾನಿಯವಾಗಿರುವುದರಿಂದ ಯಾರೂ ಬೇಕಾದರೂ ಬಳಸಬಹುದು ಎಂದು ತಿಳಿಸಿದ್ದಾರೆ.
ಈ ವೇಳೆ ಬಂಟ್ವಾಳ ತಾಲೂಕಿನ ಗ್ರಾಮ ವಿಕಾಸ ಸಂಯೋಜಕ ಮನೋಹರ ಕಂಜತ್ತೂರು, ನವೀನ್ ಕೊಡ್ಮಾಣ್ ಚಾಪೆ ಸೇರಿಂದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.




