Breaking
25 Sep 2026, Fri

ಸಿಲಿಂಡರ್ ಸ್ಪೋಟದಿಂದ ಮನೆ ಛಿದ್ರ: ಏಳು ಮಂದಿಗೆ ಗಾಯ

ಕೊಪ್ಪಳ: ಗಂಗಾವತಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಸಿಲಿಂಡರ್ ಸ್ಫೋಟಗೊಂಡು ಮನೆಯೊಂದು ಛಿಧ್ರವಾಗಿ ಏಳು ಮಂದಿ ಗಾಯಗೊಂಡಿರುವ ಘಟನೆ ಡಿ.12 ರಂದು ನಡೆದಿದೆ.

ಗಾಯಗೊಂಡವರನ್ನು ರಾಜೇಶ, ದುರಗಪ್ಪ, ಸುರೇಶ, ಹುಸೇನಮ್ಮ, ನಾಗರಾಜ, ವಿಷ್ಣು, ಹುಲಿಗೆಮ್ಮ ಮತ್ತು ಶ್ರೀಕಾಂತ್ ಎಂದು ಗುರುತಿಸಲಾಗಿದೆ.

ಮಹಿಳೆಯೊಬ್ಬರು ಹೊಸದಾಗಿ ಖರೀದಿಸಿದ್ದ ಸಿಲಿಂಡರನ್ನು ಹಚ್ಚಲು ಮುಂದಾಗಿದ್ದಾಗ ಸಿಲಿಂಡರ್ ಸ್ಫೋಟವಾಗಿದೆ.

ಸ್ಫೋಟದ ಅಬ್ಬರಕ್ಕೆ ಮನೆಯ ಗೋಡೆಗಳು ಛಿದ್ರವಾಗಿದ್ದು, ಪಕ್ಕದ ಮನೆಗೂ ಹಾನಿಯಾಗಿದೆ. ಗಾಯಗೊಂಡವರನ್ನು ಗಂಗಾವತಿ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *