Breaking
25 Sep 2026, Fri

ಖ್ಯಾತ ಕಬಡ್ಡಿ ಪಟು ರವಿಕಿರಣ್ ಕುಸಿದು ಬಿದ್ದು ಸಾವು

ಕಾಸರಗೋಡು: ಖ್ಯಾತ ಕಬಡ್ಡಿ ಪಟುವೋರ್ವರು ಕುಸಿದು ಬಿದ್ದು ಮೃತಪಟ್ಟ ಘಟನೆ ಬದಿಯಡ್ಕದಲ್ಲಿ ನಡೆದಿದೆ.

ಮೃತರನ್ನು ಪೈಕ ಮೂಲಡ್ಕದ ರವಿಕಿರಣ್(49) ಎಂದು ಗುರುತಿಸಲಾಗಿದೆ.

ಸ್ಥಳೀಯ ಕಬಡ್ಡಿ ತಂಡಗಳಲ್ಲಿ ಗುರುತಿಸಿಕೊಂಡಿದ್ದ ರವಿ ಅವರು ಮನೆಯಲ್ಲಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಚೆ೦ಗಳದ ಇ.ಕೆ.ನಾಯನಾ‌ರ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.

ಮೃತರು ಪತ್ನಿ , ಮಗಳು, ಅಳಿಯ ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *