ಮಂಡ್ಯ: ಶ್ರೀ ಆದಿಚುಂಚನಗಿರಿ ಮಠದಲ್ಲಿ ಡಿ. 16 ರಿಂದ 26 ರವರೆಗೆ ಉಚಿತ ಅರ್ಚಕ ತರಬೇತಿ ಶಿಬಿರವನ್ನು ಆಯೋಜಿಸಿದೆ.
ಸಮಾಜದ ಎಲ್ಲಾ ವರ್ಗಗಳಿಗೂ ತೆರೆಯಲಾಗಿರುವ ಈ ಶಿಬಿರದಲ್ಲಿ ಜಾತಿ, ಧರ್ಮ, ಲಿಂಗಭೇದವಿಲ್ಲದೆ ಎಲ್ಲರೂ ಭಾಗವಹಿಸಬಹುದು.

ಈ ಶಿಬಿರದಲ್ಲಿ ಪೂಜಾ ವಿಧಾನಗಳು, ಸಂಕಲ್ಪ ಮಾಡುವ ವಿಧಾನ, ವೇದ ಮಂತ್ರಗಳ ಪಠಣ,ಗಾಯತ್ರಿ ಮಂತ್ರ ಧ್ಯಾನ ಶ್ಲೋಕಗಳು,ಪಂಚಾಂಗ (ಹಿಂದೂ ಕ್ಯಾಲೆಂಡರ್) ಅಧ್ಯಯನವನ್ನು ಕಲಿಸಿಕೊಡಲಾಗುತ್ತದೆ. ಈ ಶಿಬಿರಕ್ಕೆ 14 ರಿಂದ 60 ವರ್ಷದೊಳಗಿನ ಯಾರಾದರೂ ಈ ತರಬೇತಿ ಶಿಬಿರಕ್ಕೆ ಸೇರ್ಪಡೆಯಾಗಬಹುದು.
ಶಿಬಿರದಲ್ಲಿ ಊಟ ಮತ್ತು ವಸತಿ, ಉಚಿತ ಸಮವಸ್ತ್ರ, ಪೂಜಾ ಪುಸ್ತಕಗಳು ನೋಟ್‌ಬುಕ್‌ಗಳು ಉಚಿತವಾಗಿ ನೀಡಲಾಗಿದ್ದು ತಟ್ಟೆ, ಲೋಟ, ಚಾಪೆ ,ದಿಂಬು ಮತ್ತು ಹೊದಿಕೆ ನೀವೇ ತರಬೇಕಾಗುತ್ತದೆ.

ಮೊದಲ ದಿನ ನೋಂದಣಿ ಕಡ್ಡಾಯವಾಗಿದ್ದು ಆಧಾರ್ ಕಾರ್ಡ್ ಜೆರಾಕ್ಸ್ ಮತ್ತು ಎರಡು ಪಾಸ್‌ಪೋರ್ಟ್ ಸೈಜ್ ಫೋಟೋಗಳು ತರಬೇಕು ಹಾಗೂ ಶಿಬಿರದ ಸಂಪೂರ್ಣ ಅವಧಿಯಲ್ಲಿ ಕಡ್ಡಾಯವಾಗಿ ಹಾಜರಿರಬೇಕು ಪೂರ್ಣ ಕಾಲದಲ್ಲಿ ಭಾಗವಹಿಸುವವರಿಗೆ ಪ್ರಮಾಣಪತ್ರ ನೀಡಲಾಗುತ್ತದೆ.
ಈ ಶಿಬಿರವು ಅರ್ಚಕರಾಗಲು ಆಸಕ್ತಿ ಹೊಂದಿದವರಿಗೆ ಮಹತ್ವದ ಅವಕಾಶವಾಗಿದೆ. ಶಿಬಿರವು ಸಂಪೂರ್ಣವಾಗಿ ಉಚಿತವಾಗಿದ್ದು, ಎಲ್ಲರಿಗೂ ತೆರೆದಿರುತ್ತದೆ. ಹೆಚ್ಚಿನ ಮಾಹಿತಿಗೆ ಈ ನಂಬರಿಗೆ ಕರೆ ಮಾಡಿ 8762665613 ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



