Breaking
22 Mar 2026, Sun

ಕಲಾಯಿ ಅಶ್ರಫ್ ಹತ್ಯೆ ಪ್ರಕರಣ: ಭರತ್ ಕುಮ್ಡೇಲ್ ವಿರುದ್ಧ ಪ್ರತಿಕಾರದ ಪೋಸ್ಟ್!: ‌ 16 ಇನ್ಸ್ಟಾಗ್ರಾಂ ಖಾತೆಗಳ ವಿರುದ್ಧ ಎಫ್ಐಆರ್

ಮಂಗಳೂರು: ಎಸ್ಡಿಪಿಐ ಮುಖಂಡ ಕಲಾಯಿ ಅಶ್ರಫ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಮುಖಂಡರೊಬ್ಬರ ಮೇಲೆ ಪ್ರತೀಕಾರ ತೀರಿಸಿಕೊಳ್ಳುವಂತಹ ಪ್ರಚೋದನಕಾರಿ ಪೋಸ್ಟ್‌ ಗಳು ಇನ್ಸ್ಟಾಗ್ರಾಂ ಖಾತೆಯಲ್ಲಿ ಹರಿದಾಡಿದ್ದು ಈ ಹಿನ್ನಲೆ 16 ಇನ್ಸ್ಟಾಗ್ರಾಂ ಖಾತೆಗಳ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

2017ರಲ್ಲಿ ನಡೆದ ಎಸ್ಡಿಪಿಐ ಮುಖಂಡ ಕಲಾಯಿ ಅಶ್ರಫ್ ಹತ್ಯೆಯ ಪ್ರಮುಖ ಆರೋಪಿ, ಹಿಂದೂ ಮುಖಂಡ ಭರತ್ ಕುಮ್ಡೇಲ್ಗೆ ಎಚ್ಚರಿಕೆ ನೀಡುವ ರೀತಿಯಲ್ಲಿ ಸಂದೇಶಗಳು ರವಾನೆಯಾಗಿದೆ. Target 900, Team Target Boys, Immu Bai ಇನ್ಸ್ಟಾಗ್ರಾಮ್ ಪೇಜ್ಗಳಲ್ಲಿ ಈ ಸಂದೇಶ ಹರಿದಾಡಿದ್ದು Revange Is Loading , Target Set One By One ಎಂದು ಪೋಸ್ಟ್‌ ಮಾಡಿ ಕೈಯಲ್ಲಿ ತಲವಾರು ಮತ್ತು ಪಿಸ್ತೂಲ್ ಹಿಡಿದು ಮುಖ ಮರೆಮಾಚಿ ಮಾಡಿರುವ ರೀಲ್ಸ್ ಹಂಚಿಕೊಳ್ಳಲಾಗಿದೆ.

ಈ ಬಗ್ಗೆ ಸುಮೋಟೊ ಕೇಸ್ ದಾಖಲಿಸಿರುವ ಪೊಲೀಸರು 16 ಇನ್ಸ್ಟಾಗ್ರಾಮ್ ಖಾತೆಗಳ ವಿರುದ್ಧ ಎಫ್ಐಆರ್ ದಾಖಲಿಸಿ, ಆಯಕಟ್ಟಿನ ಜಾಗಗಳ ಮೇಲೆ ಮತ್ತು ನಟೋರಿಯಸ್ ಗ್ಯಾಂಗ್ಗಳ ಚಲನವಲನಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.

Leave a Reply

Your email address will not be published. Required fields are marked *