Breaking
22 Mar 2026, Sun

ಪಡುಬಿದ್ರಿಯಲ್ಲಿ ಭೀಕರ ಕಾರು ಅಪಘಾತ: ಗೌಜಿ ಇವೆಂಟ್ ನ ಮಾಲಕ ಅಭಿಷೇಕ್ ಸಾವು

ಉಡುಪಿ: ಕಾರು ಅಪಘಾತದಲ್ಲಿ ಮಂಗಳೂರಿನ ಹೆಸರಾಂತ ಗೌಜಿ ಇವೆಂಟ್ ನ ಮಾಲಕರಾದ ಅಭಿಷೇಕ್ ಅವರು ಮೃತಪಟ್ಟ ಘಟನೆ ಇಂದು ಬೆಳಿಗ್ಗೆ(ಡಿ. 10) ನಡೆದಿದೆ.

ಮುಂಜಾನೆ 2.20 ರ ವೇಳೆಗೆ ಪಡುಬಿದ್ರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರಂತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಗಂಭೀರವಾಗಿ ಗಾಯಗೊಂಡ ಅಭಿಷೇಕ್ ಅವರನ್ನು ತಕ್ಷಣವೇ ಶ್ರೀನಿವಾಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಅಪಘಾತದಲ್ಲಿ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *