Breaking
22 Mar 2026, Sun

ಬಿಸಿರೋಡಿನ ಹಾರ್ಡ್‌ ವೇರ್‌ ಅಂಗಡಿಯ ಬೀಗ ಮುರಿದು ಸಾವಿರಾರು ರೂ. ನಗದು ಹಾಗೂ ಸಾಮಾಗ್ರಿಗಳು ಕಳವು

ಬಂಟ್ವಾಳ: ಕೃಷ್ಣಾ ಕಾಂಪ್ಲೆಕ್ಸ್ ನಲ್ಲಿರುವ ರಾಮ್ ದೇವ್ ಹಾರ್ಡ್‌ ವೇರ್‌ ಅಂಗಡಿಯ ಬೀಗ ಮುರಿದು ಸಾವಿರಾರು ರೂ. ನಗದು ಹಾಗೂ ಸಾಮಾಗ್ರಿಗಳನ್ನು ಕಳವು ಮಾಡಿದ ಘಟನೆ ಬಿಸಿರೋಡಿನಲ್ಲಿ ನಡೆದಿದೆ.

ಅಂಗಡಿಯ ಡ್ರಾಯರ್ ನಲ್ಲಿ ಇರಿಸಿದ್ದ 50,100 ರೂ ನಗದು, ಮಾರಾಟಕ್ಕೆಂದು ತಂದಿದ್ದ ನೀರಿನ ಪೈಪಿನ ಸಾಮಗ್ರಿಗಳು, ಬಾಗಿಲಿನ ಹಿತ್ತಾಳೆಯ ಸಾಮಗ್ರಿಗಳು ಮತ್ತು ಬಾತ್ ರೂಮ್ ನ ಸಾಮಗ್ರಿಗಳು ಇದ್ದ ಹೊಸ ಬಾಕ್ಸ್ ಗಳು ಸೇರಿದಂತೆ ಒಟ್ಟು 85,073 ರೂ ಮೌಲ್ಯದ ಸೊತ್ತುಗಳು ಕಳವು ಮಾಡಲಾಗಿದೆ ಎಂದು ತಿಳಿದುಬಂದಿದೆ.

ಈ ಕುರಿತು ಅಂಗಡಿ ಮ್ಯಾನೇಜರ್‌ ಜೀತೇಂದ್ರಕುಮಾರ್ ಬಂಟ್ವಾಳ ನಗರ ಪೋಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *