Breaking
26 Jun 2026, Fri

ಕಲ್ಲಡ್ಕ : ಯುವವಾಹಿನಿ ಬಂಟ್ವಾಳ ಘಟಕದ ಆಶ್ರಯದಲ್ಲಿ ಗುರುತತ್ವವಾಹಿನಿ ಮಾಲಿಕೆ 61 ಕಾಯ೯ಕ್ರಮ

ಕಲ್ಲಡ್ಕ : ಯುವವಾಹಿನಿ ಬಂಟ್ವಾಳ ಘಟಕದ ಆಶ್ರಯದಲ್ಲಿ ಗುರುತತ್ವವಾಹಿನಿ ಮಾಲಿಕೆ 61 ಕಾಯ೯ಕ್ರಮ ವೀರಕಂಭ ಜಯಪ್ರಕಾಶ್ ತೆಕ್ಕಿಪಾಪು ಅವರ ಮನೆಯಲ್ಲಿ ನ. 27ರಂದು ನಡೆಯಿತು.

ಈ ವೇಳೆ ಮಾತನಾಡಿದ ಯುವವಾಹಿನಿ ಬಂಟ್ವಾಳ ಘಟಕದ ನಿಕಟಪೂರ್ವ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ ಅವರು “ಬ್ರಹ್ಮಶ್ರೀ ನಾರಾಯಣ ಗುರುಗಳು ಮಾನವತೆಯ ಜ್ಯೋತಿ, ಅಂಧಕಾರ, ಅಸಮಾನತೆ, ಅಹಂಕಾರ ಮತ್ತು ಅಜ್ಞಾನ ರಾತ್ರಿಗಳಲ್ಲಿ ಬಂದು “ಒಂದು ಜಾತಿ, ಒಂದು ಧರ್ಮ, ಒಂದು ದೇವರು ” ಎಂದು ಪ್ರತಿಯೊಬ್ಬರಲ್ಲಿ ಜ್ಞಾನದ ಬೆಳಕು, ಸಮಾನತೆಯ ಬೆಳಕು, ಪ್ರೀತಿಯ ಬೆಳಕು ಚೆಲ್ಲಿ, ಮನುಕುಲಕೆ ದಾರಿದೀಪದ ಬೆಳಕು ನೀಡಿದರು ಎಂದರು.

ಯುವವಾಹಿನಿ ಬಂಟ್ವಾಳ ಘಟಕದ ಉಪಾಧ್ಯಕ್ಷ ಕಿರಣ್‌ರಾಜ್ ಪೂಂಜರೆಕೋಡಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.

ಇದೇ ಸಂದರ್ಭದಲ್ಲಿ ವೇಣುಗೋಪಾಲ್ ಪೂಜಾರಿ ವೀರಕಂಭ, ರಕ್ಷಿತ್ ಪೂಜಾರಿ ಗಣೇಶ್‌ನಗರ, ಹಾಗೂ ತಿಮ್ಮಪ್ಪ ಪೂಜಾರಿ ಪುಳಿತ್ತಡಿ ಇವರುಗಳ ಚಿಕಿತ್ಸಾ ವೆಚ್ಚಕ್ಕಾಗಿ ವೀರಕಂಭ ಬಿಲ್ಲವ ಗ್ರಾಮ ಸಮಿತಿಯ ವತಿಯಿಂದ ರೂ 30,000/- ಆರೋಗ್ಯ ನಿಧಿ ಹಸ್ತಾಂತರ ಮಾಡಲಾಯಿತು.

ವೇದಿಕೆಯಲ್ಲಿ ಕಲ್ಲಡ್ಕ ವಲಯ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ, ನಿಯೋಜಿತ ಅಧ್ಯಕ್ಷ ಚಂದ್ರಶೇಖರ್ ಸಾಲಿಯನ್,ವೀರಕಂಭ ಬಿಲ್ಲವ ಗ್ರಾಮ ಸಮಿತಿಯ ಅಧ್ಯಕ್ಷ ಪ್ರಶಾಂತ್ ತೆಕ್ಕಿಪಾಪು ವೀರಕಂಭ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜನಾರ್ದನ ಪೂಜಾರಿ ಗೊಳಿಮಾರ್, ಯುವವಾಹಿನಿ ಮಾಣಿ ಘಟಕದ ಅಧ್ಯಕ್ಷ ಶಿವರಾಜ್ ಪಿ.ಆರ್, ಮಾಜಿ ಅಧ್ಯಕ್ಷ ಹರೀಶ್ ಪೂಜಾರಿ ಬಾಕಿಲ, ನಿವೃತ್ತ ಸೈನಿಕ ಚಂದ್ರಶೇಖರ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ಮಾಜಿ ಅಧ್ಯಕ್ಷರುಗಳು, ಸದಸ್ಯರುಗಳು, ವೀರಕಂಭ ಬಿಲ್ಲವ ಗ್ರಾಮ ಸಮಿತಿಯ ಪದಾಧಿಕಾರಿಗಳು ಸದಸ್ಯರುಗಳು, ತೆಕ್ಕಿ ಪಾಪು ಜಯಪ್ರಕಾಶ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಯುವವಾಹಿನಿ ಬಂಟ್ವಾಳ ಘಟಕದ ಸಮಾಜ ಸೇವಾ ನಿರ್ದೇಶಕ ಪ್ರಜಿತ್ ಅಮೀನ್ ಏರಮಲೆ ಸ್ವಾಗತಿಸಿ, ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕ ಹರೀಶ್ ಸಾಲ್ಯಾನ್ ಅಜೆಕಲ ವಂದಿಸಿದರು.

Leave a Reply

Your email address will not be published. Required fields are marked *