Breaking
9 Aug 2026, Sun

ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ವರ್ಷಾವಧಿ ಕೋಲದ ಅಂಗವಾಗಿ ಶ್ರೀ ನಾಗದೇವರಿಗೆ ಫಲಪಂಚಾಮೃತ ಅಭಿಷೇಕ ಹಾಗೂ ತಂಬಿಲ ಸೇವೆ

ಬಂಟ್ವಾಳ: ಸಜೀಪ ಮೂಡದ ಶ್ರೀ ಕ್ಷೇತ್ರ ಪಣೋಲಿಬೈಲುವಿನ ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ವರ್ಷಾವಧಿ ಕೋಲದ ಅಂಗವಾಗಿ ಪುಣ್ಯಹ ಪಂಚಗವ್ಯ ದ್ವಾದಶ ನಾಳಿಕೇರಗಣ ಯಾಗ ನವಕ ಪ್ರಧಾನ ಶ್ರೀ ನಾಗದೇವರಿಗೆ ಫಲಪಂಚಾಮೃತ ಅಭಿಷೇಕ ತಂಬಿಲ ಸೇವೆ ಅನ್ನದಾನವು ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಜರುಗಿತು.

ಈ ಸಂದರ್ಭದಲ್ಲಿ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ರವಿಶಂಕರ್ ಶೆಟ್ಟಿ, ಕಾರ್ಯನಿರ್ವಹಣಾ ಅಧಿಕಾರಿ ದಿವಾಕರ ಮುಗುಳ್ಯ ಮಾಗಣೆಯ ಪಾಲೆ ಮಂಟಪ ಸಂಸಾರ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ರವೀಂದ್ರನಾಥ್ ಭಂಡಾರಿ ಪುಣಕ್ಕೆ ಮಜಲು, ಅರ್ಚಕರು ಸಿಬ್ಬಂದಿ ವರ್ಗ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *