Breaking
23 Mar 2026, Mon

ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪಂಚಮಿ ಪೂಜೆ ಹೋಮ ಹಾಗೂ ಪಂಚಾಮೃತ ಅಭಿಷೇಕ

ಬಂಟ್ವಾಳ: ಮುಗುಳಿಯ ಸಜೀಪ ಮುನ್ನೂರಿನ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪಂಚಮಿಯ ಅಂಗವಾಗಿ ಶ್ರೀ ಕ್ಷೇತ್ರದಲ್ಲಿ ಪುಣ್ಯಹ ಪಂಚಗವ್ಯ ಗಣ ಹೋಮ, ಪವಮಾನ ಸೂಕ್ತ ಅಭಿಷೇಕ, ಪಂಚಾಮೃತ ಅಭಿಷೇಕ, ಮಹಾಪೂಜೆಯು ನೆರವೇರಿತು.

ಈ ಪೂಜೆಯನ್ನು ಸಜೀಪ ಮಾಗ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಜರಗಿತು.

ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜಯ ಶಂಕರ ಬಾಸ್ರಿತಾಯ, ಅರ್ಚಕ ಕೃಷ್ಣ ಭಟ್, ಸಮಿತಿ ಸದಸ್ಯರಾದ ಹರಿಪ್ರಸಾದ್ ಭಂಡಾರಿ, ಎನ್.ಕೆ .ಶಿವ , ಶ್ರೀನಿವಾಸ ನಾಯಕ್ , ಕಾವ್ಯಶ್ರೀ, ರಾಜೇಶ್ ಪೂಜಾರಿ, ಕವಿತಾ, ಧನಂಜಯ ಶೆಟ್ಟಿ ಪರಾರಿ ಗುತ್ತು, ರವೀಂದ್ರ ಕಂಬಳಿ ಹರೀಶ್ ಗಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಧಾರ್ಮಿಕ ಪೂಜೆ ನಂತರ ಭಕ್ತರಿಗೆ ಅನ್ನದಾನ ವ್ಯವಸ್ಥೆಯೂ ನೆರವೇರಿಸಲಾಯಿತು. ಊರವರು ಹಾಗೂ ಕುಟುಂಬದವರು ಶ್ರೀ ದೇವರ ಕೃಪೆಗೆ ಪಾತ್ರರಾಗಿ ಪ್ರಸಾದವನ್ನು ಸ್ವೀಕರಿಸಿದರು.

Leave a Reply

Your email address will not be published. Required fields are marked *