ಮಂಗಳೂರು:ಸಂವಿಧಾನ ಅನುಚ್ಚೇದ 341(1) ರಂತೆ ಇದ್ದ ಸಂವಿಧಾನಿಕ ಹಕ್ಕನ್ನು ಮರಳಿ ನೀಡಲು ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲಾ ಸಮಾಜ ಸೇವಾ ಸಂಘ (ರಿ)ಕೊಂಪದವು ಇದರ ವತಿಯಿಂದ ದಿನಾಂಕ 5/11/2024ರ ಮಂಗಳವಾರ “ಹಕ್ಕೋತಾಯ ಜಾಥಾ”ವನ್ನು ಹಮ್ಮಿಕೊಂಡಿದೆ.
ಜಾಥಾವು ಬೆಳಿಗ್ಗೆ 10.30ಗಂಟೆಗೆ ನಗರದ ಜ್ಯೋತಿ ವೃತ್ತದಿಂದ ಆರಂಭಗೊಂಡು ಮಿನಿ ವಿಧಾನಸೌದದ ವರೆಗೆ ಸಾಗಲಿದೆ ಎಂದು, ಈ ಜಾಥಾದಲ್ಲಿ ಸಮಾಜ ಬಂದುಗಳೆಲ್ಲ ಭಾಗವಹಿಸುವಂತೆ ಜಿಲ್ಲಾ ಸಮಾಜ ಸೇವಾ ಸಂಘ (ರಿ) ಕೊಂಪದವು ಪ್ರಕಟಣೆಯಲ್ಲಿ ತಿಳಿಸಿದೆ.