ಕಿನ್ನಿಗೋಳಿ: ಅಡಿಕೆ ಕೀಳುವ ವೇಳೆ ಆಯತಪ್ಪಿ ಬಿದ್ದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಕಿನ್ನಿಗೋಳಿಯಲ್ಲಿ ನಡೆದಿದೆ.
ಮೃತಪಟ್ಟ ವ್ಯಕ್ತಿಯನ್ನು ಕಿನ್ನಿಗೋಳಿಯ ಗೋಳಿಜೋರ ನಿವಾಸಿ ಗೋಪಾಲ ಶೆಟ್ಟಿಗಾರ್ ಎಂದು ಗುರುತಿಸಲಾಗಿದೆ. ಶೆಟ್ಟಿಗಾರ್ ಅವರು ಕಿನ್ನಿಗೋಳಿಯ ಬಸ್ಸು ನಿಲ್ದಾಣದಲ್ಲಿ ಫ್ಯಾನ್ಸಿ ಅಂಗಡಿ ಹೊಂದಿದ್ದರು ಎನ್ನಲಾಗಿದೆ.

ನ.23 ರ ಸಂಜೆ ಗೋಪಾಲ ಶೆಟ್ಟಿಗಾರ್ ಅವರು ಮನೆ ಟ್ಯಾರೆಸಿಗೆ ಹೋಗಿ ಬಿದಿರಿನ ಕೋಲಿನ ಮೂಲಕ ಅಡಿಕೆ ಕೀಳುವ ಸಂದರ್ಭ ಆಯ ತಪ್ಪಿ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.




