ಬಂಟ್ವಾಳ: ರೈಡರ್ಸ್ ಕ್ಲಬ್ ವಾಮದಪದವು ಇದರ ವತಿಯಿಂದ ಪದವು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಮೈದಾನದಲ್ಲಿ ಬೈಕ್ ರೇಸ್ ಸ್ಪರ್ಧೆ ನ.23ರಂದು ನಡೆಯಲಿದೆ.

ವಾಮದಪದವಿನ ಗ್ರಾಮೀಣ ಪ್ರದೇಶದಲ್ಲಿ ಪ್ರಥಮ ಬಾರಿಗೆ ಈ ರೋಮಾಂಚಕಾರಿ ಬೈಕ್ ಸ್ಪರ್ಧೆ ಏರ್ಪಡಿಸಲಾಗಿದ್ದು, ಮಹಿಳಾ ವಿಭಾಗದ ಸೇರಿದಂತೆ ಪುರುಷರ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಈ ಸ್ಪರ್ಧೆಯಲ್ಲಿ ವಿವಿಧ ಜಿಲ್ಲೆಗಳ ಸ್ಪರ್ಧಿಗಳು ಭಾಗವಹಿಸಲಿದ್ದಾರೆ ಎಂದು ಸಂಘಟಕ ಜಯಚಂದ್ರ ಬೊಳ್ಮಾರು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.




