Breaking
9 Aug 2026, Sun

ಸಜೀಪ ಮುನ್ನೂರಿನ ಶ್ರೀ ಶಾರದಾಂಬಿಕಾ ಭಜನಾ ಮಂದಿರದಲ್ಲಿ ವಾಗ್ದೇವಿ ಪೂಜೆ

ಬಂಟ್ವಾಳ : ಶ್ರೀ ಶಾರದಾಂಬಿಕಾ ಭಜನಾ ಮಂದಿರ ಶಾರದಾ ನಗರ ಸಜೀಪ ಮುನ್ನೂರು ಕ್ಷೇತ್ರದಲ್ಲಿ ವಾಗ್ದೋಷ ನಿವಾರಣೆಗಾಗಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ವಾಗ್ದೇವಿ ಪೂಜೆ ನಡೆಯಿತು.

ಸಜೀಪ ಮಾಗಣೆತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಅವರ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳು ನೆರವೇರಿತು. ಬಳಿಕ ಕ್ಷೇತ್ರಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಅನ್ನದಾನದ ವ್ಯವಸ್ಥೆಯನ್ನು ಮಾಡಲಾಗಿತ್ತು.

ಈ ಸಂದರ್ಭ ಸಮಿತಿಯ ಅಧ್ಯಕ್ಷ ಸತೀಶ ಗಟ್ಟಿ, ಪದಾಧಿಕಾರಿಗಳಾದ ತನಿಯಪ್ಪ ಪೂಜಾರಿ , ಯೋಗೀಶ ಪರಮೇಶ್ವರ, ಪುರಂದರ, ತಿಮ್ಮಪ್ಪ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *