Breaking
24 Mar 2026, Tue

ಸಿದ್ದಕಟ್ಟೆ ಕೊಡಂಗೆ ಕಂಬಳದ ವತಿಯಿಂದ ಎಕ್ಸೆಲ್ ಕಾಲೇಜ್ ಗುರುವಾಯನಕೆರೆ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ರವರಿಗೆ ಸನ್ಮಾನ

ಬಂಟ್ವಾಳ: ಸಿದ್ಧಕಟ್ಟೆ ಕೊಡಂಗೆ ವೀರ-ವಿಕ್ರಮ ಜೋಡುಕರೆ ಕಂಬಳದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಕಂಬಳದ ಸಮಿತಿಯ ವತಿಯಿಂದ ಶಿಕ್ಷಣದ ಕ್ಷೇತ್ರದಲ್ಲಿ ಮಾಡಿದ ಅಪಾರವಾದ ಸಾಧನೆಯನ್ನು ಗುರುತಿಸಿ ಗುರುವಾಯನಕೆರೆಯ ವಿದ್ಯಾ ಸಂಸ್ಥೆಯಾದ ಎಕ್ಸೆಲ್ ಕಾಲೇಜಿನ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ ರವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ರಮನಾಥ ರೈ, ರಾಜ್ಯ ಕಂಬಳ ಸಮಿತಿಯ ಅಧ್ಯಕ್ಷರಾದ ದೇವಿ ಪ್ರಸಾದ್ ಶೆಟ್ಟಿ,ಬೆಳಪು , ಕಾರ್ಯದರ್ಶಿ ವಿಜಯಕುಮಾರ್ ಕಂಗಿನ ಮನೆ, ಕೋಶಾಧಿಕಾರಿ ಲೋಕೇಶ್ ಮಚ್ಚೂರು , ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್, ಸತೀಶ್ ಕಾಶಪಟ್ನ, ಪ್ರವೀಣ್ ಫರ್ನಾಂಡಿಸ್, ಮತ್ತು ಕಂಬಳದ ಅಧ್ಯಕ್ಷರಾದ ಸಂದೀಪ್ ಶೆಟ್ಟಿ ಹಾಗೂ ಕಂಬಳದ ಪದಾಧಿಕಾರಿಗಳಾದ ಶಶಿಧರ ಶೆಟ್ಟಿ ಕಲಾಪು, ರಾಘವೇಂದ್ರ ಭಟ್ ಹೊಕ್ಕಾಡಿಗೋಳಿ, ಸಂಘಟನಾ ಕಾರ್ಯದರ್ಶಿ ಮಧುಸೂಧನ್ ಸಾಲ್ಯಾನ್, ಸುರೇಶ್ ಶೆಟ್ಟಿ ವಕೀಲರು, ಕಿರಣ್ ಕುಮಾರ್ ಮಂಜಿಲ, ವಸಂತ ಶೆಟ್ಟಿ ಕೆದಗೆ, ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *