ಗುರುವಾಯನಕೆರೆ: ಹೆದ್ದಾರಿ ಕಾಮಗಾರಿ ಯಂತ್ರದ ಅಡಿಗೆ ಸಿಲುಕಿ ವೃದ್ಧನೋರ್ವ ಸಾವನ್ನಪ್ಪಿದ ಘಟನೆ ಗುರುವಾಯನಕೆರೆಯ ಮದ್ದಡ್ಕದಲ್ಲಿ ನ.20 ರಂದು ನಡೆದಿದೆ.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಭರದಿಂದ ಸಾಗುತ್ತಿದ್ದು, ಮದ್ದಡ್ಕ ಮಸೀದಿ ಸಮೀಪದ ಹೆದ್ದಾರಿಯ ಕಾಮಗಾರಿ ನಡೆಸುವ ವೇಳೆ ವೃದ್ಧ ನಡೆದುಕೊಂಡು ಹೋಗುವ ಸಂದರ್ಭದಲ್ಲಿ ಚಾಲಕನ ಅಜಾಗರೂಕತೆಯಿಂದ ಕಾಮಗಾರಿ ಯಂತ್ರದ ಅಡಿಗೆ ಸಿಲುಕಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




