Breaking
24 Jun 2026, Wed

ಮಂಗಳೂರು ಓಂ ಶ್ರೀ ಮಠಕ್ಕೆ ಕೈಲಾಸ ಆಶ್ರಮದ ಶ್ರೀ ಶ್ರೀ ಶ್ರೀ ಜಯೇಂದ್ರ ಪುರಿ ಮಹಾ ಸ್ವಾಮೀಜಿ ಭೇಟಿ

ಮಂಗಳೂರು: ಬೆಂಗಳೂರು ಕೈಲಾಸ ಮಹಾ ಸಂಸ್ಥಾನದ ಪೀಠಾಧೀಶ್ವರರಾದ ಶ್ರೀ ಶ್ರೀ ಶ್ರೀ ಜಯೇಂದ್ರ ಪುರಿ ಮಹಾ ಸ್ವಾಮೀಜಿಯವರಿಗೆ ಮಂಗಳೂರು ಓಂ ಶ್ರೀಮಠದ ಗುರುಗಳಾದ ಅಖಂಡ ಭಾರತ ಸನಾತನ ಸಂತಸಮಿತಿ ರಾಷ್ಟ್ರ ಅಧ್ಯಕ್ಷ ಮಹಾಮಂಡಲೇಶ್ವರ ಸ್ವಾಮಿ ಓಂ ಶ್ರೀ ವಿದ್ಯಾನಂದ ಸರಸ್ವತಿ ಹಾಗೂ ಸಹ ಅಧ್ಯಕ್ಷ ಓಂ ಶ್ರೀ ಮಠದ ಮಠಾಧಿಪತಿ ಮಾತಾಶ್ರೀ ಓಂ ಶ್ರೀ ಶಿವಜ್ಞಾನಮಯೀ ಸರಸ್ವತಿಯವರು ಸ್ವಾಗತಿಸಿ ಗೌರವಾರ್ಪಣೆ ನೀಡಿದರು.

ಈ ಸಂದರ್ಭದಲ್ಲಿ ಅಖಂಡ ಭಾರತ ಸನಾತನ ಸಂತಸಮಿತಿ ಕೋಶಾಧಿಕಾರಿ ಕನ್ಯಾನ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಪರಮ ಪೂಜ್ಯ ಶ್ರೀ ಮಹಾಬಲೇಶ್ವರ ಸರಸ್ವತಿ ಸ್ವಾಮೀಜಿಯವರು , ಪೊಳಲಿ ಕ್ಷೇತ್ರದ ತಂತ್ರಿಯವರಾದ ವಿಶ್ವ ಹಿಂದೂ ಪರಿಷತ್ ಮಠ ಮಂದಿರ ಪ್ರಮುಖರಾದ ಗಿರಿ ಪ್ರಕಾಶ್ ತಂತ್ರಿಯವರು ವಿಶ್ವ ಹಿಂದೂ ಪರಿಷತ್ತು ಮಠ ಮಂದಿರ ಜಿಲ್ಲಾ ಪ್ರಮುಖ್, ಕೊಲ್ಯ ಮೂಕಾಂಬಿಕಾ ಕ್ಷೇತ್ರ ಟ್ರಸ್ಟ್ ಚೇರ್ಮನ್ ಮಧುಸೂದನ್ ಅಯ್ಯರ್ ಹಾಗೂ ಓಂ ಶ್ರೀ ಮಠದ ಶಿಷ್ಯರು ಭಕ್ತಾದಿಗಳು, ಕೈಲಾಸ ಆಶ್ರಮದ ಶ್ರೀಗಳ ಶಿಷ್ಯರು ಭಕ್ತಾದಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *